ದೇಶ

ಉತ್ತರ ಪ್ರದೇಶ: ನೀರಾವರಿ ಇಂಜಿನಿಯರ್ ನಿವಾಸದ ಮೇಲೆ ಐಟಿ ದಾಳಿ, 50 ಕೋಟಿ ರೂ. ಸಂಪತ್ತು ವಶ

Raghavendra Adiga
ಲಕ್ನೋ: ಆದಾಯ ತೆರಿಗೆ ಇಲಾಖೆ (ಐಟಿ) ಉತ್ತರ ಪ್ರದೇಶ ನೀರಾವರಿ ವಿಭಾಗದ  ಇಂಜಿನಿಯರ್ ಒಬ್ಬರಿಂದ 50 ಕೋಟಿ ರೂ.ಗೆ ಅಧಿಕ ಮೊತ್ತದ ಸಂಪತ್ತನ್ನು ವಶಕ್ಕೆ ಪಡೆದಿದೆ.
ದೆಹಲಿ, ನೊಯ್ಡಾ, ಘಾಜಿಯಾಬಾದ್, ಗುರುಗ್ರಾಮ ಮತ್ತು ಇಟಾಹ್ ಸೇರಿದಂತೆ ಏಳು ನಗರಗಳ 22 ಸ್ಥಳಗಳಲ್ಲಿ ಐಟಿ ದಾಳಿ ನಡೆಸಲಾಗಿದ್ದು  ರಾಜೇಶ್ವರ್ ಸಿಂಗ್ ಯಾದವ್ ಎನ್ನುವ ಇಂಜಿನಿಯರ್ ಗೆ ಸೇರಿದ್ದ 2.5 ಕೋಟಿ ಮೌಲ್ಯದ ನಗದು ಮತ್ತು ಚಿನ್ನಾಭರಣಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಯಾದವ್ ಅವರ ಸಹೋದರ ಮತ್ತು ಸೋದರ ಸಂಬಂಧಿ ಮನೆಗಳ ನೇಲೆಯೂ ಐಟಿ ದಾಳಿ ನಡೆದಿದೆ.
ಹಿರಿಯ ಐಟಿ ಅಧಿಕಾರಿಯ ಪ್ರಕಾರ, ಯಾದವ್ ಅವರು ತಮ್ಮ ಸಹೋದರ ಮತ್ತು ಸೋದರ ಸಂಬಂಧಿಯ ಹೆಸರಿನಲ್ಲಿ ಶೆಲ್ ಕಂಪನಿಗಳನ್ನು ಹೊಂದಿದ್ದಾರೆ.
SCROLL FOR NEXT