ಪುಣೆ ವಿಶ್ವವಿದ್ಯಾಲಯ (ಸಂಗ್ರಹ ಚಿತ್ರ)
ಪುಣೆ: ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದರೆ ಚಿನ್ನದ ಪದಕ ಬರುತ್ತದೆ ಎಂಬುದು ಈವರೆಗಿನ ನಿಯಮವಾಗಿತ್ತು. ಆದರೆ, ಪುಣೆ ವಿಶ್ವವಿದ್ಯಾಲಯವು ನಿಯಮವೊಂದನ್ನು ರೂಪಿಸಿರುವುದು ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಚಿನ್ನದ ಪದಕ ಪಡೆಯುಂತಹ ವಿದ್ಯಾರ್ಥಿ ಹೆಚ್ಚಿನ ಅಂಕ ಪಡೆಯುವುದಷ್ಟೇ ಅಲ್ಲದೆ, ಆ ವಿದ್ಯಾರ್ಥಿ ಕುಡುನಾಗಿರಬಾರದು ಹಾಗೂ ಸಸ್ಯಾಹಾರಿಯಾಗಿರಬೇಕು ಎಂಬ ನಿಯಮವನ್ನು ಪುಣೆ ವಿಶ್ವವಿದ್ಯಾಲಯ ಜಾರಿಗೆ ತಂದಿದೆ.
'ಶೇಲಾರ್ ಮಾಮಾ' ಹೆಸರಿನಲ್ಲಿ ಚಿನ್ನದ ಪದಕವೊಂದಿದ್ದು, ಆ ಪಡೆಯಲು ಈ ಷರತ್ತುಗಳು ಅನ್ವಯವಾಗುತ್ತವೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.
ಪುಣೆ ವಿಶ್ವವಿದ್ಯಾಲಯದ ಈ ಘೋಷಣೆ ಹೊರಬೀಳುತ್ತಿದ್ದಂತೆಯೇ ಇದಕ್ಕೆ ವ್ಯಾಪಕ ಆಕ್ಷೇಪ ಹಾಗೂ ಆಕ್ರೋಶಗಳು ವ್ಯಕ್ತವಾಗತೊಡಗಿವೆ.
ಎನ್'ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರು ಈ ನಿಯಮವನ್ನು ತೀವ್ರವಾಗಿ ವಿರೋಧಿಸಿದ್ದು, ಇಂಥಹ ನಿರ್ಧಾರ ನನಗೆ ಆಘಾತವನ್ನು ತಂದಿದೆ. ಚಿನ್ನ ಪದಕ ಸಿಗೋದು ಮೆರಿಟ್ ಮೇಲಲ್ಲವೇ? ಶಿಕ್ಷಣದ ಗುಣಮಟ್ಟದ ಬಗ್ಗೆ ಗಮನ ಹರಿಸೋದು ಬಿಟ್ಟು ಈ ರೀತಿ ಜನರನ್ನು ವಿಭಜಿಸುವುದು ಸರಿಯೇ ಎಂದು ಟ್ವಿಟರ್ ನಲ್ಲಿ ಪ್ರಶ್ನಿಸಿದ್ದಾರೆ.
ವಿಶ್ವವಿದ್ಯಾಲಯದ ವಿವಾದಾತ್ಮ ನಿರ್ಧಾರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಯುವ ಸೇನಾ ನಾಯಕ ಆದಿತ್ಯ ಠಾಕ್ರೆಯವರು, ವಿವಿಯ ನಿರ್ಧಾರವನ್ನು ನೋಡಿದರೆ ಆಶ್ಚರ್ಯವಾಗುತ್ತಿದೆ. ಇದು ವಿಶ್ವವಿದ್ಯಾಲಯವೇ ಅಥವಾ ರೆಸ್ಟೋರೆಂಟೇ ಎಂಬ ಅನುಮಾನಗಳು ಮೂಡುತ್ತಿವೆ ಎಂದು ಹೇಳಿದ್ದಾರೆ.
ವಿಶ್ವವಿದ್ಯಾಲಯದ ಕೂಡಲೇ ತನ್ನ ನಿರ್ಧಾರವನ್ನು ಹಿಂಪಡೆಯಬೇಕು. ಹಾಗೂ ಆಹಾರ ಆಯ್ಕೆಗಳ ಕುರಿತಂತೆ ಗಮನ ಹರಿಸುವುದರ ಬದಲಿಗೆ ವಿದ್ಯಾಭ್ಯಾಸದ ಕಡೆಗೆ ಗಮನಹರಿಸಬೇಕು. ವಿದ್ಯಾರ್ಥಿಗಳು ಹೇಗೆ ಉದ್ಯೋಗ ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಗಮನ ಹರಿಸಬೇಕು. ವಿದ್ಯಾರ್ಥಿ ಯಾವುದೇ ಕೆಟ್ಟ ಅಭ್ಯಾಸಗಳನ್ನು ರೂಢಿಸಿಕೊಳ್ಳಬಾರದು ಎಂಬ ಮಾನದಂಡವನ್ನು ನಾನು ಒಪ್ಪುದ್ದೇನೆ. ಆದರೆ, ಸಸ್ಯಾಹಾರಿಗಳಿಗೆ ಮಾತ್ರ ಎಂಬ ಮಾನದಂಡವನ್ನು ನಾನು ಒಪ್ಪುವುದಿಲ್ಲ. ನೀವು ವಿಶ್ವವಿದ್ಯಾಲಯವನ್ನು ನಡೆಸುತ್ತಿದ್ದೀರೋ ಅಥವಾ ರೆಸ್ಟೋರೆಂಟ್ ನಡೆಸುತ್ತಿದ್ದೀರೋ...? ಇಂತಹ ನಿರ್ಧಾರಗಳನ್ನು ತೆಗೆದುಕೊಂಡವರಿಗೆ ಮೊದಲು ಚಿನ್ನದ ಪದಕವನ್ನು ನೀಡಬೇಕು. ನಿರ್ಧಾರ ತೆಗೆದುಕೊಂಡ ಅಧಿಕಾರಿಯನ್ನು ಮೊದಲು ಹುದ್ದೆಯಿಂದ ತೆಗೆಯಬೇಕೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos