ಅಮಾನತಾದ ವೈದ್ಯ ಅರುಣಾಚಲ್ ಚೌದರಿ (ಫೇಸ್ ಬುಕ್ ಚಿತ್ರ) 
ದೇಶ

ಡೆಂಘೀ ನಿಯಂತ್ರಣ ಕುರಿತು ಅಸಾಹಯಕತೆ: ಫೇಸ್ ಬುಕ್ ನಲ್ಲಿ ಬರೆದ ಸರ್ಕಾರಿ ವೈದ್ಯನ ಅಮಾನತು!

ಪಶ್ಚಿಮ ಬಂಗಾಳದಲ್ಲಿ ಮಿತಿ ಮೀರಿರುವ ಡೆಂಘೀ ನಿಯಂತ್ರಣ ಸಂಬಂಧ ಸರ್ಕಾರದ ನಿರ್ಲಕ್ಷತನ ಹಾಗೂ ತಮ್ಮ ಅಸಹಾಯಕತೆ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ ಸರ್ಕಾರಿ ವೈದ್ಯರನ್ನು ಪಶ್ಟಿಮ ಬಂಗಾಳ ಸರ್ಕಾರ ಅಮಾನತು ಮಾಡಿದೆ.

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮಿತಿ ಮೀರಿರುವ ಡೆಂಘೀ ನಿಯಂತ್ರಣ ಸಂಬಂಧ ಸರ್ಕಾರದ ನಿರ್ಲಕ್ಷತನ ಹಾಗೂ ತಮ್ಮ ಅಸಹಾಯಕತೆ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ ಸರ್ಕಾರಿ ವೈದ್ಯರನ್ನು ಪಶ್ಟಿಮ  ಬಂಗಾಳ ಸರ್ಕಾರ ಅಮಾನತು ಮಾಡಿದೆ.
ರಾಜ್ಯದಲ್ಲಿ ಹೆಚ್ಚಾಗಿರುವ ಡೆಂಘಿ ಜ್ವರ ಹೆಚ್ಚಿರುವ ಬಗ್ಗೆ ನೈಜ ಸ್ಥಿತಿಯನ್ನು ಫೇಸ್‌ ಬುಕ್‌ನಲ್ಲಿ ಬರೆದುಕೊಂಡಿದ್ದ ವೈದ್ಯ ಅರುಣಾಚಲ ದತ್ತ ಚೌಧರಿ ಎಂಬವವರನ್ನು ಪಶ್ಚಿಮ ಬಂಗಾಳ ಆರೋಗ್ಯ ಇಲಾಖೆ ಶನಿವಾರ ಅಮಾನತು  ಮಾಡಿದೆ. ಅರುಣಾಚಲ ದತ್ತ ಚೌಧರಿ ಅವರ ಬರಹ ಸಾರ್ವಜನಿಕರನ್ನು ತಪ್ಪು ಅಭಿಪ್ರಾಯ ಮೂಡಲು ಕಾರಣವಾಗಿದೆ. ಅಲ್ಲದೇ ಆಸ್ಪತ್ರೆಗಳ ಆಡಳಿತಕ್ಕೆ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ಅಮಾನತು ಮಾಡಲಾಗಿದೆ  ಎಂದು ಆದೇಶದಲ್ಲಿ ಹೇಳಲಾಗಿದೆ.
ಬರಾಸತ್‌ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿ ಅರುಣಾಚಲ್‌ ಅವರನ್ನು ಈ ಹಿಂದೆ ನೇಮಿಸಲಾಗಿತ್ತು. 500 ಮಂದಿ ಡೆಂಘಿ ಜ್ವರ ಪೀಡಿತರು ಆಸ್ಪತ್ರೆಗೆ ದಾಖಲಾಗಿದ್ದಾರೆ. ರೋಗ ಪತ್ತೆ ಮಾಡುವ ಸವಾಲಿನ ಕುರಿತು  ಬರೆದುಕೊಂಡಿರುವ ಅವರು ಅನೇಕ ರೋಗಿಗಳು ನೆಲದ ಮೇಲೆ ಮಲಗುವ ಸ್ಥಿತಿಯಿದೆ ಎಂದು ಅಕ್ಟೋಬರ್‌ 6ರಂದು ಬರೆದಿದ್ದರು. ಅಲ್ಲದೆ ಓಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದ್ದರೂ ಈವರೆಗೂ ಕ್ರಮ ಕೈಗೊಂಡಿಲ್ಲ ಎಂದು ತಮ್ಮ  ಅಸಹಾಯಕತೆ ಬರೆದುಕೊಂಡಿದ್ದರು. ಇದೇ ಕಾರಣಕ್ಕೆ ವೈದ್ಯ ಅರುಣಾಚಲ್ ರನ್ನು ಅಮಾನತು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನು ವೈದ್ಯ ಅರುಣಾಚಲ್ ಅಮಾನತು ಕ್ರಮವನ್ನು ಖಂಡಿಸಿ ಪಶ್ಚಿಮ ಬಂಗಾಳದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ವೈದ್ಯರ ಅಮಾನತು ಪ್ರಶ್ನಿಸಿ ವಿಪಕ್ಷಗಳು ಮಮತಾ ಸರ್ಕಾರವನ್ನು ಟೀಕಿಸುತ್ತಿವೆ, ಅಲ್ಲದೆ 18,000 ಡೆಂಘಿ  ಪ್ರಕರಣಗಳಲ್ಲಿ 19 ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರ ಹೇಳಿದೆ. ಆದರೆ, ಮೃತರ ಸಂಖ್ಯೆಯನ್ನು ಮಮತಾ ಬ್ಯಾನರ್ಜಿ ಸರ್ಕಾರ ಮುಚ್ಚಿಟ್ಟಿದೆ ಎಂದು ವಿರೋಧಪಕ್ಷಗಳು ಆರೋಪಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT