ನವದೆಹಲಿ: ಪಶ್ಚಿಮ ಬಂಗಾಳ ಹಾಗೂ ಒಡಿಶಾ ನಡುವೆ ಸುಮಾರು 2 ವರ್ಷಗಳಿಂದ ನಡೆಯುತ್ತಿದ್ದ ರಸಗುಲ್ಲಾ ರಾದ್ಧಾಂತಕ್ಕೆ ಕೊನೆಗೂ ಮುಕ್ತಿ ಸಿಕ್ಕಿದ್ದು, ರಸಗುಲ್ಲಾ ಪಶ್ಚಿಮ ಬಂಗಾಳ ಮೂಲದ ಸಿಹಿ ತಿಂಡಿ ಎಂದು ಜಿಐ (ಜಿಯೋಗ್ರಾಫಿಕಲ್ ಇಂಡಿಕೇಷನ್ ಆಫ್ ಗೂಡ್ಸ್ ರೆಜಿಸ್ಟ್ರೇಷನ್) ಘೋಷಿಸಿದೆ.
ರಸಗುಲ್ಲ ಪ್ರಾರಂಭವಾಗಿದ್ದು ಪಶ್ಚಿಮ ಬಂಗಾಳದಲ್ಲಿ ಎಂದು ಜಿಐ ಮಾನ್ಯತೆ ನೀಡಿದ್ದು, ರಸಗುಲ್ಲಾ ಬಂಗಾಳ ಜನತೆಯ ಅನ್ವೇಷಣೆಯ ಸಿಹಿ ಖಾದ್ಯ ಎಂಬುದು ಅಧಿಕೃತವಾಗಿದೆ. ರಸಗುಲ್ಲಾ ಅನ್ವೇಷಣೆಯ ಮಾನ್ಯತೆಗೆ ಒಡಿಶಾ ಹಾಗೂ ಪಶ್ಚಿಮ ಬಂಗಾಳದ ನಡುವೆ 2015 ರಿಂದ ಸಮರ ನಡೆಯುತ್ತಿತ್ತು.
ಜಿಐ ರಸಗುಲ್ಲಾಗೆ ಪಶ್ಚಿಮ ಬಂಗಾಳದ ಮಾನ್ಯತೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಪಶ್ಚಿಮ ಬಂಗಾಳದ ಆಹಾರ ಸಂಸ್ಕರಣೆ ಸಚಿವ ಅಬ್ದುರ್ ರೆಝಾಕ್ "ಜಿಐ ನ ಮಾನ್ಯತೆಗಾಗಿ ನಡೆದಿದ್ದ ಹೋರಾಟ ಕೇವಲ ರಸಗುಲ್ಲಾಕ್ಕಾಗಿ ಅಲ್ಲ, ಅದು ಬಂಗಾಳಿಗಳ ಹೆಮ್ಮೆ ಹಾಗೂ ಗುರುತಿಗಾಗಿ ನಡೆದ ಹೋರಾಟ ಎಂದಿದ್ದಾರೆ.