ಶ್ರೀನಗರ: ಕಾಶ್ಮೀರ ಪ್ರತ್ಯೇಕತಾವದಿ ನಾಯಕರಾದ ಮಿರ್ವಾಜಾ ಉಮರ್, ಯಾಸೀನ್ ಮಲ್ಲೀಕ್ ನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರತ್ಯೇಕತಾವಾದಿ ನಾಯಕರು ನಗರದ ಕೇಂದ್ರ ಪ್ರದೇಶವಾಗಿರುವ ಲಾಲ್ ಚೌಕ್ ನತ್ತ ಪ್ರತಿಭಟನಾ ಮೆರವಣಿಗೆಯನ್ನು ಕೊಂಡೊಯ್ಯಲು ಪ್ರಾರಂಭಿಸಿದ ಹಿನ್ನೆಲೆಯಲ್ಲಿ ಜೆಕೆಎಲ್ಎಫ್ ನ ನಾಯಕನನ್ನು ಬಂಧಿಸಲಾಗಿದೆ. ಪ್ರತಿಭಟನೆಯ ವೇಳೆ ಮಾತನಾಡಿರುವ ಮಿರ್ವಾಜ ಫಾರೂಖ್, ಭದ್ರತಾ ಸಿಬ್ಬಂದಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದು, ದಕ್ಷಿಣ ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿಗಲು ಜನರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದಾರೆ.
ಇನ್ನು ಇದೇ ವೇಳೆ ಕಾಶ್ಮೀರದ ಸ್ವಾಯತ್ತತೆಗೆ ಕಾಶ್ಮೀರದ ಹೊರಭಾಗದಲ್ಲಿಯೂ ಹೋರಾಡುತ್ತಿರುವವರನ್ನು ಬಂಧಿಸಲಾಗುತ್ತಿದ್ದು, ಅವರ ಪರಿಸ್ಥಿತಿಯ ಬಗ್ಗೆಯೂ ಮಿರ್ವಾಜಾ ಫಾರೂಖ್ ಆತಂಕ ವ್ಯಕ್ತಪಡಿಸಿದ್ದಾರೆ. ಕಾಶ್ಮೀರದ ಪ್ರತ್ಯೇಕತಾವಾದಿಗಳನ್ನು ಬಂಧಿಸಲಾಗುತ್ತಿದ್ದು, ಇದರ ವಿರುದ್ಧ ಪ್ರತಿಭಟನೆಗೆ ಕರೆ ನೀಡಲಾಗಿತ್ತು.