ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

'ಮೋದಿ ಗ್ರಾಮಗಳು': ಆಡಳಿತ ವಿರೋಧಿ ಅಲೆ 'ಕೈ'ಗೆ ಲಾಭವಾಗದಂತೆ ತಡೆಯಲು ಬಿಜೆಪಿ ಹೊಸ ಅಸ್ತ್ರ!

ಗುಜರಾತ್ ವಿಧಾನಸಭೆ ಸನಿಹವಾಗುತ್ತಿದ್ದಂತೆಯೇ ರಾಜ್ಯದಲ್ಲಿರುವ ಆಡಳಿತ ವಿರೋಧಿ ಅಲೆ ವಿರೋಧಿಗಳಿಗೆ ಲಾಭವಾಗದಂತೆ ತಡೆಯಲು ಬಿಜೆಪಿ ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ.

ನರೇಂದ್ರ ಮೋದಿ
Srinivas Rao BV
Updated On : 16 Nov 2017, 1:07 am
ನವದೆಹಲಿ: ಗುಜರಾತ್ ವಿಧಾನಸಭೆ ಸನಿಹವಾಗುತ್ತಿದ್ದಂತೆಯೇ ರಾಜ್ಯದಲ್ಲಿರುವ ಆಡಳಿತ ವಿರೋಧಿ ಅಲೆ ವಿರೋಧಿಗಳಿಗೆ ಲಾಭವಾಗದಂತೆ ತಡೆಯಲು ಬಿಜೆಪಿ ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. 
ಪ್ರತಿಪಕ್ಷಗಳಿಗೆ ಲಾಭವಾಗುವ ಪರಿಸ್ಥಿತಿ ಇರುವ ಗ್ರಾಮಗಳು, ಪ್ರದೇಶಗಳಲ್ಲಿ ಮೋದಿ ಜನಪ್ರಿಯತೆಯನ್ನು ಪರಿಣಾಮಕಾರಿ ಪ್ರಯೋಗಿಸಲು ಬಿಜೆಪಿ ಯೋಜನೆ ರೂಪಿಸಿದ್ದು, ಮೋದಿ ಗ್ರಾಮಗಳನ್ನು ಪಟ್ಟಿ ಮಾಡಿದೆ. ಅಷ್ಟೇ ಅಲ್ಲದೇ ಗ್ರಾಮಸ್ಥರೇ ಮೋದಿ, ಬಿಜೆಪಿ ಪರವಾಗಿ ಪ್ರಚಾರ ಮಾಡಲು ಸ್ವತಃ ಮುಂದಾಗುತ್ತಿದ್ದು, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರ ಭೇಟಿ ಯಶಸ್ವಿಯಾಗದಂತೆ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.
ಮೋದಿ ಗ್ರಾಮಗಳಲ್ಲಿ ಬಿಜೆಪಿ ಗುಜರಾತ್ ನ ಈ ಚುನಾವಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಷ್ಠೆಯನ್ನು ಪಣಕ್ಕಿಟ್ಟಿದ್ದಾರೆ. ಒಂದು ವೇಳೆ ಗುಜರಾತ್ ನಲ್ಲಿ ಬಿಜೆಪಿಗೆ ಕಡಿಮೆ ಮತ ಬಂದರೆ ಕೇಂದ್ರದಲ್ಲಿ ಪ್ರಧಾನಿ ಮೋದಿ ಅವರ ಶಕ್ತಿ ಕುಗ್ಗಲಿದೆ ಎಂಬುದನ್ನು ಗ್ರಾಮಸ್ಥರಿಗೆ ಬಿಜೆಪಿ ನಾಯಕರು ಮನವರಿಕೆ ಮಾಡಿಕೊಡುತ್ತಿದ್ದಾರೆ. 

Advertisement

Advertisement

ಇತ್ತೀಚೆಗಷ್ಟೇ ಜಾರಿಗೆ ತಂದ ಜಿಎಸ್ ಟಿಯಿಂದ ಗುಜರಾತ್ ನಲ್ಲಿ ವ್ಯಾಪರಿಗಳು ಹಾಗೂ ಮಧ್ಯಮ ವರ್ಗದ ಜನತೆ ಸಂತಸಗೊಂಡಿಲ್ಲ, ಆದ್ದರಿಂದ ಬಿಜೆಪಿಗೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದ್ದು, ಆಡಳಿತ ವಿರೋಧಿ ಅಲೆಯನ್ನು ನಿಯಂತ್ರಿಸಲು ಬಿಜೆಪಿ ಮೋದಿ ಜನಪ್ರಿಯತೆ ಹಾಗೂ ಪ್ರತಿಷ್ಠೆಯನ್ನು ಚುನಾವಣೆಯ ಗೆಲುವಿಗಾಗಿ ಬಳಕೆ ಮಾಡುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement