ನವದೆಹಲಿ: ದೆಹಲಿಯ ವಾಯು ಗುಣಮಟ್ಟ ಸುಧಾರಣೆಯಾಗುತ್ತಿದ್ದು, ಟ್ರಕ್ ಗಳಿಗೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಿ, ಕಟ್ಟಡ ನಿರ್ಮಾಣ ಕಾಮಗಾರಿಗೆ ಅನುಮತಿ ನೀಡಲಾಗಿದೆ. ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ಪರಿಸರ ಸಂಸ್ಥೆ ನಿಷೇಧ ತೆರವಿಗೆ ಅನುಮತಿ ನೀಡಿದ್ದು, ಟ್ರಕ್ ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ಇನ್ನು ಇದೇ ವೇಳೆ ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ (ಇಪಿಸಿಎ) ಸಹ ವಾಹನ ನಿಲುಗಡೆ ಶುಲ್ಕವನ್ನು ಕಡಿಮೆ ಮಾಡಿದೆ. ಸಿಎಸ್ಇ ಸಂಶೋಧಕ ಉಸ್ಮಾನ್ ನಸೀಮ್ ಐಎಎನ್ಎಸ್ ಗೆ ಹೇಳಿಕೆ ನೀಡಿದ್ದು, ನಿರ್ಬಂಧವನ್ನು ತೆರವುಗೊಳಿಸಲಾಗಿದ್ದು, ಡಿಸೇಲ್ ಜನರೇಟರ್ ಸೆಟ್ ಗಳ ಮೇಲಿನ ನಿರ್ಬಂಧವನ್ನೂ ತೆರವುಗೊಳಿಸಲಾಗಿದೆ ಎಂದು ಹೇಳಿದ್ದಾರೆ.