ರಾಷ್ಟ್ರೀಯ ಹಸಿರು ಪೀಠ (ಎನ್ ಜಿ ಟಿ)
ನವದೆಹಲಿ: ರಾಷ್ಟ್ರೀಯ ಹಸಿರು ಪೀಠ (ಎನ್ ಜಿ ಟಿ) ಇಂದು ಆಂದ್ರ ಪ್ರದೇಶದ ಭವ್ಚಿಷ್ಯದ ರಾಜಧಾನಿ ಅಮರಾವತಿಗೆ ನೀಡಲಾದ ಪರಿಸರ ಪರವಾನಗಿ ವಿಚಾರವಾಗಿ ಮಧ್ಯಪ್ರವೇಶಿಸಲು ನಿರಾಕರಿಸಿತು. ಹಸಿರು ಪೀಠವು ಅಮರಾವತಿ ನಿರ್ಮಾಣ ಸ್ಥಳದ ಪರಿಶೀಲನೆಗಾಗಿ ಮೇಲ್ವಿಚಾರಣಾ ಸಮಿತಿ ಮತ್ತು ಅನುಷ್ಠಾನ ಸಮಿತಿ ಎಂದು ಎರಡು ಸಮಿತಿಗಳನ್ನು ರೂಪಿಸಿದೆ ಸಾಮಾಜಿಕ ಕಾರ್ಯಕರ್ತ ಪಿ.ಶ್ರೀಮಣ್ಣಾಯಣನ್, ಇ ಎ ಎಸ್ ಶರ್ಮಾ ಮತ್ತು ಇತರರು ಸಲ್ಲಿಸಿದ ಮನವಿ ಹಿನ್ನೆಲೆಯಲ್ಲಿ ಈ ಹಿಂದೆ ಎನ್ ಜಿ ಟಿ ಕೇಂದ್ರ ಮತ್ತು ಆಂಧ್ರಪ್ರದೇಶದಿಂದ ಪ್ರತಿಕ್ರಿಯೆಯನ್ನು ಕೇಳಿತ್ತು.
ಅಮರಾವತಿ ನಿರ್ಮಾಣವಾಗುತ್ತಿರುವ ಜಾಗವು ಪ್ರವಾಹ ಪೀಡಿತ ಪ್ರದೇಶವಾಗಿದೆ ಹಳ್ಳಿಗಾಡಿನ ಸ್ಥಲದಲ್ಲಿ ರಾಜಧಾನಿ ನಗರಕ್ಕೆ ಶಿಲಾನ್ಯಾಸ ನೆರವೇರಿಸುವಾಗ ರಾಜ್ಯ ಸರ್ಕಾರವು ಪರಿಸರ ಕಾಳಜಿಯ ಅಂಶಗಲನ್ನು ಪರಿಗಣಿಸಿರಲಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ. ಯೋಜನೆಗೆ ಎನ್ ಜಿ ಟಿ ಯಿಂದ ಪರಿಸರದ ಅನುಮತಿ ಪಡೆಯದೆ ಯಾವುದೇ ಕಾರ್ಯಾಚರಣೆಯನ್ನು ಕೈಗೊಳ್ಳಬಾರದು ಎಂದು ಆಂಧ್ರಪ್ರದೇಶ ಸರ್ಕಾರಕ್ಕೆ ಎನ್ ಜಿ ಟಿ ನಿರ್ದೇಶಿಸಿತ್ತು.
ಹೀಗಿದ್ದರೂ, ಹಸಿರು ಪೀಠವು ಕಳೆದ ವರ್ಷ ಕೃಷ್ಣ ನದಿದಂಡೆಯಲ್ಲಿ ಪ್ರಸ್ತಾಪಿತ ರಾಜಧಾನಿ ನಿರ್ಮಾಣ ಚಟುವಟಿಕೆ ಮುಂದುವರಿಸಲು ಅನುಮತಿಸಿತು. ಪೀಠ ಅದಾಗಳೇ ಆದೇಶದಲ್ಲಿ ತಿಳಿಸಿರುವಂತೆ ನಿಯಮಗಳಿಗೆ ಒಳಪಟ್ಟು ರಾಜಧಾನಿ ನಿರ್ಮಾನವಾಗಬೇಕೆಂದು ಹೇಳಿತ್ತು. ಅರ್ಜಿದಾರರು ಪರಿಸರ ಮತ್ತು ಅರಣ್ಯ, ನಗರ ಅಭಿವೃದ್ಧಿ ಮತ್ತು ಜಲ ಸಂಪನ್ಮೂಲ, ಆಂದ್ರ ಪ್ರದೇಶ ಸರ್ಕಾರ ಮತ್ತು ಆಂಧ್ರಪ್ರದೇಶ ರಾಜಧಾನಿ ಅಭಿವೃದ್ಧಿ ಪ್ರಾಧಿಕಾರ (ಎಪಿಸಿಆರ್ ಡಿ ಎ) ಸಚಿವಾಲಯಕ್ಕೆ ಈ ಕುರಿತು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos