ಸೌದಿ: ಸೌದಿ ಅರೇಬಿಯಾದ ರಾಜ ಸಲ್ಮಾನ್ ಮುಂದಿನ ವಾರ ನಿವೃತ್ತರಾಗಲಿದ್ದು, ಸಂಪೂರ್ಣ ಅಧಿಕಾರವನ್ನು ತಮ್ಮ ಮಗ ಮೊಹಮ್ಮದ್ ಬಿನ್ ಸಲ್ಮಾನ್ ಗೆ ವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಬ್ರಿಟನ್ ನ ಪತ್ರಿಕೆ ಡೇಲಿ ಮೇಲ್ ವರದಿಯ ಪ್ರಕಾರ 81 ವರ್ಷದ ರಾಜ ಸಲ್ಮಾನ್ ಮಗನಿಗೆ ಅಧಿಕಾರ ವಹಿಸಿದ ಬಳಿಕ ಎರಡು ಪವಿತ್ರ ಮಸೀದಿಯ ನಿರ್ವಹಣೆಯತ್ತ ಗಮನಹರಿಸಲಿದ್ದಾರೆ. 64 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹಿರಿಯ ರಾಜ ತನ್ನ ಉತ್ತರಾಧಿಕಾರಿಗೆ ಅಧಿಕಾರವನ್ನು ಪೂರ್ಣ ಪ್ರಮಾಣದಲ್ಲಿ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ.
ಭ್ರಷ್ಟಾಚಾರದ ಆರೋಪದಡಿಯಲ್ಲಿ 40 ಜನ ರಾಜಪರಿವಾರದವರನ್ನು ಬಂಧಿಸಿ ಸುದ್ದಿಯಾಗಿದ್ದ ಕೆಲವೇ ದಿನಗಳಲ್ಲಿ ಮೊಹಮ್ಮದ್ ಬಿನ್ ಸಲ್ಮಾನ್ ಗೆ ಸೌದಿಯ ಅಧಿಕಾರ ಪೂರ್ಣ ಪ್ರಮಾಣದಲ್ಲಿ ದೊರೆಯುತ್ತಿದೆ.