ದೇಶ

ಕೇಂದ್ರ, ರಾಜ್ಯ ಸರ್ಕಾರದ 210 ವೆಬ್ ಸೈಟ್ ಗಳಿಂದ ಆಧಾರ್ ವಿವರಗಳು ಬಹಿರಂಗ: ಯುಐಡಿಎಐ

Srinivas Rao BV
ನವದೆಹಲಿ: ಕೇಂದ್ರ ಹಾಗೂ ರಾಜ್ಯಗಳ ಸುಮಾರು 200 ಕ್ಕೂ ಹೆಚ್ಚು ವೆಬ್ ಸೈಟ್ ಗಳಿಂದ ಆಧಾರ್ ವಿವರಗಳು ಸಾರ್ವಜನಿಕರಿಗೆ ಬಹಿರಂಗಗೊಂಡಿದೆ ಎಂದು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತಿಳಿಸಿದೆ. 
ಆಧಾರ್ ಫಲಾನುಭವಿಗಳ ಹೆಸರು, ವಿಳಾಸಗಳನ್ನು ವೆಬ್ ಸೈಟ್ ಗಳಲ್ಲಿ ಬಹಿರಂಗಗೊಂಡಿದೆ ಎಂದು ಆರ್ ಟಿಐ ಪ್ರಶ್ನೆಯೊಂದಕ್ಕೆ ಯುಐಡಿಎಐ ಉತ್ತರಿಸಿದೆ. ಖಾಸಗಿ ವಿವರಗಳು ಉಲ್ಲಂಘನೆಯಾಗಿರುವುದನ್ನು ಗಮನಿಸಿರುವುದಾಗಿ ಹೇಳಿದೆ. ಆದರೆ ಯಾವಾಗ ಉಲ್ಲಂಘನೆಯಾಗಿದೆ ಎಂಬ ಮಾಹಿತಿ ಇಲ್ಲ ಎಂದು ತಿಳಿಸಿದೆ. 
ಶಿಕ್ಷಣ ಇಲಾಖೆಯ ವೆಬ್ ಸೈಟ್ ಗಳಲ್ಲಿಯೂ ಸಹ ಆಧಾರ್ ವಿವರಗಳನ್ನು ಬಹಿರಂಗಗೊಂಡಿವೆ ಎಂದು ಆರ್ ಟಿಐ ಗೆ ನೀಡಿರುವ ಉತ್ತರದಲ್ಲಿ ಯುಐಡಿಎಐ ತಿಳಿಸಿದೆ. ಅಷ್ಟೇ ಅಲ್ಲದೇ 200 ವೆಬ್ ಸೈಟ್ ಗಳಿಂದಲೂ ವಿವರಗಳನ್ನು ಈಗಾಗಲೇ ತೆಗೆದುಹಾಕಲಾಗಿದೆ ಎಂದು ತಿಳಿಸಿದೆ. 
SCROLL FOR NEXT