ದೇಶ

'ಪದ್ಮಾವತಿ'ಗೆ ತ್ವರಿತ ಪ್ರಮಾಣಪತ್ರ: ನಿರ್ಮಾಪಕರ ಮನವಿ ತಿರಸ್ಕರಿಸಿದ ಸಿಬಿಎಫ್‏ಸಿ

Lingaraj Badiger
ಮುಂಬೈ: ದೀಪಿಕಾ ಪಡುಕೋಣೆ ಅಭಿನಯದ 'ಪದ್ಮಾವತಿ' ಚಿತ್ರದ ಬಿಡುಗಡೆ ವಿರೋಧಿಸಿ ದೇಶದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿದ್ದು, ವಿರೋಧದ ನಡುವೆಯೇ ಚಿತ್ರ ಬಿಡುಗೆಡೆಗೆ ತ್ವರಿತ ಪ್ರಮಾಣ ಪತ್ರ ನೀಡುವಂತೆ ಚಿತ್ರದ ನಿರ್ಮಾಪಕರು ಸಲ್ಲಿಸಿದ್ದ ಮನವಿಯನ್ನು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್‌ಸಿ) ಸೋಮವಾರ ತಿರಸ್ಕರಿಸಿದೆ.
ಪದ್ಮಾವತಿ ಮನವಿಯನ್ನು ತಿರಸ್ಕರಿಸಿದ ಸಿಬಿಎಫ್ ಸಿ, ನಿಯಮ ಅನುಸಾರ ಮತ್ತು ಸರದಿಯ ಪ್ರಕಾರ ಚಿತ್ರವನ್ನು ಪರಿಶೀಲಿಸಿ ಚಿತ್ರವನ್ನು ಪ್ರಮಾಣೀಕರಿಸಲಾಗುವುದು ಎಂದು ಸ್ಪಷ್ಟಪಡಿಸಿದೆ. 
ಎರಡು ದಿನಗಳ ಹಿಂದಷ್ಟೇ ಸಿಬಿಎಫ್ ಸಿ ಅನುಮತಿ ಇಲ್ಲದೆ ಚಿತ್ರ ಪ್ರದರ್ಶಿಸಿರುವುದಕ್ಕೆ ಪದ್ಮಾವತಿ ನಿರ್ಮಾಪಕರನ್ನು ಸಿಬಿಎಫ್ ಸಿ ಅಧ್ಯಕ್ಷ ಪ್ರಸೂನ್ ಜೋಶಿ ಅವರು ತರಾಟೆಗೆ ತೆಗೆದುಕೊಂಡಿದ್ದರು.
ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರವನ್ನು ಮಾಧ್ಯಮ ಪ್ರತಿನಿಧಿಗಳಿಗಾಗಿ ಶುಕ್ರವಾರ ಮತ್ತು ಶನಿವಾರ ಪ್ರದರ್ಶಿಸಿದ ಬಗ್ಗೆ ಜೋಶಿಯವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಪರಿಶೀಲನೆಗಾಗಿ ಮಾತ್ರ ಪದ್ವಾವತಿ ಚಿತ್ರದ ಅರ್ಜಿ ಬಂದಿದೆ. ಇದು ಚಿತ್ರ ನಿರ್ಮಾಪಕರಿಗೆ ಗೊತ್ತು ಮತ್ತು ಪೇಪರ್ ಕೆಲಸ ಅಪೂರ್ಣವಾಗಿದೆ. ಚಿತ್ರ ಕಾಲ್ಪನಿಕವೇ ಅಥವಾ ಐತಿಹಾಸಿಕ ಎಂಬುದನ್ನು ಸ್ಪಷ್ಟಪಡಿಸದೆ ಆ ಸ್ಥಳವನ್ನು ಖಾಲಿ ಬಿಡಲಾಗಿದೆ. ಹೀಗಾಗಿ ಆ ಕುರಿತು ದಾಖಲೆಗಳನ್ನು ಒದಗಿಸುವಂತೆ ಸರಳವಾಗಿ ಮತ್ತು ನ್ಯಾಯಸಮ್ಮತವಾಗಿ ಕೇಳಲಾಗುವುದು ಎಂದು ಜೋಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದರು.
SCROLL FOR NEXT