ಮೋದಿ ಸರ್ಕಾರವನ್ನು ಬ್ರಿಟೀಷ್ ರಾಜ್ ಗೆ ಹೋಲಿಸಿದ ಶಿವಸೇನೆ 
ದೇಶ

ಮೋದಿ ಸರ್ಕಾರದ ಆಡಳಿತವನ್ನು ಬ್ರಿಟೀಷ್ ರಾಜ್ ಗೆ ಹೋಲಿಸಿದ ಶಿವಸೇನೆ

ಶಿವಸೇನಾ ತನ್ನ ಮುಖವಾಣಿಯಾದ ಸಾಮ್ನಾ ದಲ್ಲಿ ಮೋದಿ ಆಡಲಿತವನ್ನು ಬ್ರಿಟೀಷ್ ರಾಜ್ ಗೆ ಹೋಲಿಸಿ ಸಂಪಾದಕೀಯ ಲೇಖನವನ್ನು ಪ್ರಕಟಿಸಿದೆ.

ಮುಂಬೈ: ಶಿವಸೇನಾ ತನ್ನ ಮುಖವಾಣಿಯಾದ ಸಾಮ್ನಾ ದಲ್ಲಿ ಮೋದಿ ಆಡಳಿತವನ್ನು ಬ್ರಿಟೀಷ್ ರಾಜ್ ಗೆ ಹೋಲಿಸಿ ಸಂಪಾದಕೀಯ ಲೇಖನವನ್ನು ಪ್ರಕಟಿಸಿದೆ. ಅದರಲ್ಲಿ ಈ ಎರಡೂ ಸರ್ಕಾರಗಳು ತಮ್ಮ ಆಳ್ವಿಕೆಗೆ ದೇವರ ಆಶೀರ್ವಾದವಿದೆ ಎಂದು ನಂಬಿದ್ದವು. ಅವರನ್ನು ಹಿಂಬಾಲಿಸುವ ಕುರುಡು ಅನುಯಾಯಿಗಳನ್ನು ಹೊಂದಿದ್ದರೆಂದು ಅದರಲ್ಲಿ ಬರೆಯಲಾಗಿದೆ.
ದೇಶದಲ್ಲಿ ಏನೇ ಒಳ್ಳೆಯ ಬೆಳವಣಿಗೆಗಳು ನಡೆದಲ್ಲಿ ಕೇಂದ್ರ ಮತ್ತು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳು ಅದನ್ನು ಹೊಗಳುತ್ತವೆ. ಹಾದರೆ ಅದೇ ಯಾವ ಕೆಟ್ಟ ಘಟನೆಗಳಾದಲ್ಲಿ ಅಂತಹಾ ಘಟನೆಗಳ ಹೊಣೆಗಾರಿಕೆಯನ್ನು ಹೊರಲು ನಿರಾಕರಿಸುತ್ತವೆ. "ಬ್ರಿಟಿಷ್ ಆಳ್ವಿಕೆಯಲ್ಲಿ, ಇಂಗ್ಲಿಷ್ ಆಳ್ವಿಕೆಯು ದೇವರ ಆಶೀರ್ವಾದ ಎಂದು ಹೇಳುವ ಜನರಿದ್ದರು ಅದೇ ರೀತಿ, ಪ್ರಧಾನಿ ಮೋದಿ ಅವರ ಬಗ್ಗೆ ಸಹ ಹೇಳುವ ಜನರನ್ನು ನಾವು ನೊಡುತ್ತೇವೆ. ಒಳ್ಳೆಯ ಮಳೆಯಾದಲ್ಲಿ ಅದು ಮೋದಿ ಸರ್ಕಾರದಿಂದ ಆಗಿದೆ ಎನ್ನುವ ಯಾರೂ ಮಳೆ, ಪ್ರವಾಹದಿಂದ ಯಾವುದೇ ಬೆಳೆ ನಷ್ಟವಾದರೆ ಮೋದಿಯನ್ನು ದೂರುವುದಿಲ್ಲ." ಎಂದು ಸಾಮ್ನಾ ವರದಿ ತಿಳಿಸಿದೆ.
ದೇಶದಾದ್ಯಂತ ಸಂಭವಿಸಿದ ರೈಲು ದುರಂತಗಳ ಬಗೆಗೆ ಹೇಳುತ್ತಾ, "ಬುಉಲೆಟ್ ರೈಲು ಮೋದಿ ಸರ್ಕಾರದ ಕನಸು, ಆದರೆ ರೈಲು ದುರಂತಗಳಲ್ಲ! ಇದರ ಬಗೆಗೆ ಮೋದಿ, ಅವರ ಹಿಂಬಾಲಕರಾರೂ ಒಂದು ಮಾತನ್ನೂ ಆಡುವುದಿಲ್ಲ. ವ್ಯವಹಾರಸ್ಥ ಅಥವಾ ಉದ್ಯಮಿಯೊಬ್ಬ ದೇಶವನ್ನಾಳುವುದು ಸರಿಯಾದ ಕ್ರಮವಲ್ಲ. "ಮೋದಿ ಅವರ ಆಳ್ವಿಕೆಯು ದೇವರ ಆಶೀರ್ವಾದ ಎಂದು ಭಾವಿಸುವ ಜನರು ಸರ್ವಶಕ್ತನಿಗೆ  ಅಗೌರವ ತೋರುತ್ತಿದ್ದಾರೆ, ಆದರೆ ಆತನೇ ಸಾಮಾನ್ಯ ಪ್ರಜಾಪ್ರಭುತ್ವದ ದೇವರು" ಎಂದು ಸಾಮ್ನಾ ತನ್ನ ಸಂಪಾದಕೀಯದಲ್ಲಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

SCROLL FOR NEXT