ನವದೆಹಲಿ: ಪದ್ಮಾವತಿ ಚಿತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿದ್ದರೂ, ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆಯಲ್ಲಿ ಪ್ರಧಾನಿ ಪಾತ್ರ ಇರಬಹುದು ಎಂದು ಶ್ರೀ ರಜಪೂತ್ ಕರಣಿ ಸೇನಾ ಹೇಳಿದೆ.
ಬನ್ಸಾಲಿ ನಿರ್ದೇಶನದ ಚಿತ್ರ ಪದ್ಮಾವತಿ ಬಿಡುಗಡೆಯ ದಿನಾಂಕ ನಿಗದಿಯಾಗುವುದಕ್ಕೂ ಮುನ್ನ ಈಗಿರುವುದಕ್ಕಿಂತಲೂ ಹೆಚ್ಚಿನ ಬೆಂಬಲವನ್ನು ಪಡೆಯುವುದಾಗಿ ಕರಣಿ ಸೇನಾದ ಮುಖ್ಯಸ್ಥ ಲೋಕೇಂದ್ರ ಸಿಂಗ್ ಕಲ್ವಿ ತಿಳಿಸಿದ್ದಾರೆ. ಪದ್ಮಾವತಿ ಚಿತ್ರದ ಬಿಡುಗಡೆಯ ದಿನಾಂಕವನ್ನು ಸ್ವಯಂ ಪ್ರೇರಿತರಾಗಿ ಮುಂದೂಡಿರುವುದಾಗಿ ಚಿತ್ರ ತಂಡ ಹೇಳುತ್ತಿದೆ. ಆದರೆ ಈ ವಿಷಯದಲ್ಲಿ ಮೋದಿ ಪಾತ್ರ ಇರಬಹುದು ಎಂದು ಲೋಕೇಂದ್ರ ಸಿಂಗ್ ಹೇಳಿದ್ದಾರೆ.
ಪ್ರಧಾನಿ, ಮುಖ್ಯಮಂತ್ರಿಗಳು, ಸಾಮಾಜಿಕ ಕಾರ್ಯಕರ್ತರು ಹೀಗೆ ಹಲವಾರು ಜನರಿಂದ ಪದ್ಮಾವತಿ ಚಿತ್ರದ ಬಿಡುಗಡೆಯ ದಿನಾಂಕ ಮುಂದೂಡಲಾಗಿದೆ ಎಂದು ಲೋಕೇಂದ್ರ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.