ಹೈದರಾಬಾದ್: 85 ವರ್ಷದ ವೃದ್ಧನೊಬ್ಬ 6 ಮಂದಿ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿದ್ದಾನೆ! ಹೈದರಾಬಾದ್ ನಲ್ಲಿ ವಾಸವಿರುವ ಕೇಂದ್ರ ಸರ್ಕಾರದ ನಿವೃತ್ತ ಅಧಿಕಾರಿ ಸತ್ಯನಾರಾಯಣ ಈ ಆರೋಪಿಯಾಗಿದ್ದು ಬಾಲಕಿಯರಿಗೆ ಚಾಕಲೇಟ್ ನೀಡಿ ಅವರನ್ನು ಮನೆಗೆ ಕರೆತಂದು ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಈತ ಕಳೆದ ಕೆಲ ತಿಂಗಳಿನಿಂದಲೂ ಈ ಕೃತ್ಯ ನಡೆಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದು ಇದೀಗ ಆರು ಬಾಲಕಿಯರು ನೀಡೀದ ದೂರಿನ ಅನುಸಾರ ಕುಶಾಯಿ ಗುಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರು ಜನ ಬಾಲಕಿಯರಲ್ಲಿ ನಾಲ್ವರ ಮೇಲೆ ಅತ್ಯಾಚಾರ ನಡೆದಿರುವುದು ಖಚಿತಪಟ್ಟಿದ್ದು ಇನ್ನಿಬ್ಬರ ಮೇಲೆ ಸಹ ಅತ್ಯಾಚಾರ ನಡೆಸಲು ಯುತ್ನಿಸಿದ್ದಾನೆ.
ಅತ್ಯಾಚಾರ ಪ್ರಕರಣ ಸಹಿತ ಪೋಕ್‌ಸೋ ಕಾಯಿದೆ ಅಡಿಯಲ್ಲಿ ವಿವಿಧ ಪ್ರಕರಣದಡಿಯಲ್ಲಿ ದೂರು ದಾಖಲಿಸಿರುವ ಪೋಲೀಸರು ವೃದ್ದನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.