ಕಾಶ್ಮೀರಕ್ಕಾಗಿ ಹೋರಾಡಲು ಹಫೀಜ್ ಸಯೀದ್ ಶಪಥ
ಪಾಕಿಸ್ತಾನದ ಜೈಲಿನಿಂದ ಬಿಡುಗಡೆಯಾಗಿರುವ ನಿಷೇಧಿತ ಉಗ್ರ ಸಂಘಟನೆ ಜೆಯುಡಿ ಮುಖ್ಯಸ್ಥ, 26/11 ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಕಾಶ್ಮೀರಕ್ಕಾಗಿ ಹೋರಾಡುವ ಶಪಥ ಮಾಡಿದ್ದಾನೆ.
ಲಾಹೋರ್: ಪಾಕಿಸ್ತಾನದ ಜೈಲಿನಿಂದ ಬಿಡುಗಡೆಯಾಗಿರುವ ನಿಷೇಧಿತ ಉಗ್ರ ಸಂಘಟನೆ ಜೆಯುಡಿ ಮುಖ್ಯಸ್ಥ, 26/11 ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಕಾಶ್ಮೀರಕ್ಕಾಗಿ ಹೋರಾಡುವ ಶಪಥ ಮಾಡಿದ್ದಾನೆ.
ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ, ಹೇಳಿಕೆ ನೀಡಿರುವ ಹಫೀಜ್ ಸಯೀದ್, ಕಾಶ್ಮೀರಕ್ಕಾಗಿ ಪಾಕಿಸ್ತಾನದಾದ್ಯಂತ ಜನರನ್ನು ಸೇರಿಸುವುದಾಗಿ ಹೇಳಿದ್ದು, ಕಾಶ್ಮೀರಿಗಳಿಗೆ ಸ್ವಾತಂತ್ರ್ಯ ಕೊಡಿಸುವುದಾಗಿ ತಿಳಿಸಿದ್ದಾನೆ. ಜಮಾತ್-ಉದ್-ದವಾ ಉಗ್ರ ಸಂಘಟಾನೆಯ ಮುಖ್ಯಸ್ಥನ ತಲೆಗೆ ಅಮೆರಿಕ 10 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ. ಇಂತಹ ಉಗ್ರನನ್ನು ಪಾಕಿಸ್ತಾನದ ನ್ಯಾಯಾಲಯ ಇತ್ತೀಚೆಗಷ್ಟೇ ಬಂಧನದಿಂದ ಬಿಡುಗಡೆಗೊಳಿಸಬೇಕೆಂದು ಆದೇಶಿಸಿತ್ತು.
ಬಿಡುಗಡೆಯ ನಂತರ ಮಾತನಾಡಿರುವ ಹಫೀಜ್ ಸಯೀದ್, ಕಾಶ್ಮೀರದ ಧ್ವನಿಯನ್ನು ಅಡಗಿಸಲು ನನ್ನನ್ನು 10 ತಿಂಗಳು ಬಂಧಿಸಲಾಗಿತ್ತು. ನಾನು ಕಾಶ್ಮೀರಕ್ಕಾಗಿ ಹೋರಾಟವನ್ನು ಮುಂದುವರೆಸುತ್ತೇನೆ ಎಂದು ಈಗ ಮತ್ತೊಮ್ಮೆ ಹೇಳಿಕೆ ನೀಡಿದ್ದಾನೆ.