ನವದೆಹಲಿ: ರ‍್ಯಾನ್ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿ ಪ್ರದ್ಯುಮನ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪ್ರಥಮ ಪಿಯು ವಿದ್ಯಾರ್ಥಿ ಪರ ಆರುಷಿ ಕೊಲೆ ಪ್ರಕರಣದಲ್ಲಿ ರಾಜೇಶ್-ನೂಪುರ್ ದಂಪತಿ ಪರ ವಾದಿಸಿದ್ದ ವಕೀಲರು ವಾದ ಮಂಡಿಸಲಿದ್ದಾರೆ.
ಆರುಷಿ ಕೊಲೆ ಪ್ರಕರಣದಲ್ಲಿ ರಾಜೇಶ್-ನೂಪುರ್ ದಂಪತಿಗಳು ಖುಲಾಸೆಗೊಳ್ಳುವುದರಲ್ಲಿ ಯಶಸ್ವಿಯಾಗಿದ್ದ ವಕೀಲ ತನ್ವೀರ್ ಅಹ್ಮದ್ ಮಿರ್ ಪ್ರಮ್ಯುಮದ್ ಹತ್ಯೆ ಪ್ರಕರಣದ ಆರೋಪಿ ಪ್ರಥಮ ಪಿಯು ವಿದ್ಯಾರ್ಥಿ ಪರವಾಗಿ ವಾದಿಸಲಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಟಿಸಿದೆ.
ಆರೋಪಿ ಬಾಲಕನ ತಂದೆಯೊಂದಿಗೆ ಪ್ರಾಥಮಿಕ ಹಂತದ ಮಾತುಕತೆ ನಡೆದಿದೆ. ಷರತ್ತು ಮತ್ತು ನಿಯಮಗಳು ಅಂತಿಮವಾಗುತ್ತಿದ್ದಂತೆಯೇ ತಾವು ಆರೋಪಿ ಪರ ವಕಾಲತ್ತು ವಹಿಸುವುದಾಗಿ ತನ್ವೀರ್ ಅಹ್ಮದ್ ತಿಳಿಸಿದ್ದಾರೆ. ಮಗನ ಪರ ವಕಾಲತ್ತು ವಹಿಸುವುದಕ್ಕಾಗಿ ಅತ್ಯುತ್ತಮ ವಕೀಲರನ್ನು ನೇಮಕ ಮಾಡುವುದಾಗಿ ಆರೋಪಿ ತಂದೆ ಹೇಳಿದ್ದಾರೆ. ಅಷ್ಟೇ ಅಲ್ಲದೇ ಗುರುಗಾಂವ್ ಪೊಲೀಸರು ತಮ್ಮ ಮಗನನ್ನು ಸಾಕ್ಷ್ಯ ಎಂದು ಪರಿಗಣಿಸಿದ್ದರು. ಆದರೆ ಸಿಬಿಐ ಆತನನ್ನು ಆರೋಪಿಯನ್ನಾಗಿಸಿ, ಹಿಂಸೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.