ತಿರುವನಂತಪುರಂ: ತೆರಿಗೆ ತಪ್ಪಿಸುವ ಸಲುವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ ಆರೋಪದ ಮೇಲೆ ಸ್ಯಾಂಡಲ್ ವುಡ್ ನಟಿ ಅಮಲಾ ಪೌಲ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಅಮಲಾ ವಿರುದ್ಧ ಕೇರಳ ಪೋಲೀಸರು ಎಫ್ ಐ ಆರ್ ದಾಖಲು ಮಾಡಿದ್ದು ಅಮಲಾ ಅವರೊಡನೆಯೇ ನಟ ಫಹಾದ ಫಾಸಿಲ್ ವಿರುದ್ಧವೂ ಸಹ ಪ್ರಕರಣ ದಾಖಲಾಗಿದೆ.
ಇಬ್ಬರು ನಟರೂ ಕೇರಳ ನಿವಾಸಿಗಳಗಿದ್ದು ತೆರಿಗೆ ತಪ್ಪಿಸುವ ಸಲುವಾಗಿ ನಕಲಿ ದಾಖಲೆಗಲನ್ನು ನೀಡಿ ಪುದುಚೇರಿಯಲ್ಲಿ ಕಾರ್ ಖರೀದಿಸಿದ್ದಾರೆ. 20 ಲಕ್ಷ ರೂ ಮೇಲ್ಪಟ್ಟ ವಿಲಾಸಿ ಕಾರ್ ಗಳಿಗೆ ಕೇರಳದಲ್ಲಿ ಶೇ.20 ರಷ್ಟು ತೆರಿಗೆ ಇದೆ. ಇದನ್ನು ತಪ್ಪಿಸಲಿಕ್ಕಾಗಿಿಬ್ಬರೂ ಪುದುಚೇರಿಗೆ ತೆರಳಿ ಕಾರ್ ಖರೀದಿಸಿದ್ದಾರೆ. ನಟ ಫಹಾದ್ ಫಾಸಿಲ್ ಅಲ್‍ಪ್ಪುಝಾ ವಿಳಾಸ ನೀಡಿ ಸಾಲ ಪಡೆದಿದ್ದರೆ, ಅಮಲಾ ಪುದುಚೇರಿಯಲ್ಲಿ ಬಾಡಿಗೆ ಕೋಣೆ ವಿಳಾಸ ನೀಡಿ `ಎಸ್ ಕ್ಲಾಸ್ ಬೆಂಜ್ ಕಾರ್` ಖರೀದಿಸಿದ್ದಾರೆ.
"ನಾನು ಭಾರತೀಯ ಪ್ರಜೆ, ನಾನು ಭಾರತದ ಯಾವ ಭಾಗದಲ್ಲಿಯೂ ಆಸ್ತಿ ಖರಿದಿ ಮಾಡಬಹುದು. ನಾನು ಕೋಟ್ಯಾಂತರ ರೂ. ತೆರಿಗೆ ಕಟ್ತಿದ್ದರೂ ಸಹ ತೆರಿಗೆ ಅಧಿಕಾರಿಗಳು ನನ್ನ ಕಡೆಯಿಂದ ಕಾನೂನು ಬಾಹಿರ ಚಟುವಟಿಕೆ ನಡೆದಿದೆ ಎಂದು ಹೇಳುತ್ತಿದ್ದು ಇದೊಂದು ಸುಳ್ಳು ಆರೋಪ" ಎಂದು ಅಮಲಾ ಪೌಲ್ ಸ್ಪಷ್ಟನೆ ನೀಡಿದ್ದಾರೆ