ದೇಶ

ರಾಷ್ಟ್ರದ ಹತ್ತು ಸ್ವಚ್ಚ ಪಾರಂಪರಿಕ ಸ್ಥಳಗಳ ಪಟ್ಟಿ ಸೇರಿದ ಶ್ರವಣಬೆಳಗೊಳ

Raghavendra Adiga
ಶ್ರವಣಬೆಳಗೊಳ: ಕೇಂದ್ರ ಸರ್ಕಾರವು ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ ದೇಶದ 10 ಸ್ವಚ್ಛ ಪಾರಂಪರಿಕ ಸ್ಥಳಗಳನ್ನು ಗುರುತಿಸಿದ್ದು ಇವುಗಳಲ್ಲಿ ಕರ್ನಾಟಕದ ಶ್ರವಣಬೆಲಗೊಳ ಸಹ ಸೇರಿದೆ. 
ದೆಹಲಿಯ ಸಿವಿಲ್ ಸರ್ವೀಸಸ್ ಅಧಿಕಾರಿಗಳ ಸಂಸ್ಥೆಯಲ್ಲಿ (ಸಿಎಸ್‍ಓಐ) ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಸಮಾಲೋಚನೆ ಸಭೆಯಲ್ಲಿ ಶ್ರವಣಬೆಳಗೊಳವನ್ನು ಸ್ವಚ್ಚ ಪಾರಂಪರಿಕ ಸ್ಥಳ ಎಂದು ಕರೆಯಲಾಗಿದೆ. ರಾಜ್ಯದ ಪ್ರತಿನಿಧಿಯಾಗಿ ಸಭೆಯಲ್ಲಿ ಭಾಗಿಯಾಗಿದ್ದ ರೋಹಿಣಿ ಸಿಂಧೂರಿ ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕದ ಮಹತ್ವದ ಕುರಿತು ವಿವರಿಸಿದರು.
ದೇಶದಲ್ಲಿ ಹೊಸತಾಗಿ ಗುರುತಿಸಲಾಗಿರುವ ಹತ್ತು ಸ್ವಚ್ಚ ಪಾರಂಪರಿಕ ತಾಣಗಳಿಗೆ ಸುಧಾರಿತ ಚರಂಡಿ, ಒಳಚರಂಡಿ, ನೈರ್ಮಲ್ಯ ಸೌಲಭ್ಯಗಳು, ನೀರು ವಿತರಣಾ ಯಂತ್ರಗಳು (ಎಟಿಎಂ), ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ರಸ್ತೆ ನಿರ್ಮಾಣ, ದೀಪ ವ್ಯವಸ್ಥೆ, ಉದ್ಯಾನ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಇನ್ನು ಶ್ರವಣಬೆಳಗೊಳದಂತೆಯೇ ಈ ಸಾಲಿನಲ್ಲಿ ಬರುವ ಇತರೆ ಸ್ಥಳಗಳೆಂದರೆ- ಗಂಗೋತ್ರಿ, ಯಮುನೋತ್ರಿ, ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯ, ಹೈದರಾಬಾದ್ ನ ಚಾರ್ ಮಿನಾರ್, ಗೋವಾದ ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿ ಚರ್ಚ್ ಮತ್ತು ಕಾನ್ವೆಂಟ್, ಕೇರಳದ ಕಾಲಡಿ, ಜಾರ್ಖಂಡ್ ನ ಬೈಜ್ನಾಥ್ ಧಾಮ್, ಗುಜರಾತಿನ ಸೋಮನಾಥ ಮತ್ತು ಬಿಹಾರದ ಗಯಾತೀರ್ಥ.
SCROLL FOR NEXT