ಕಛ್: ವಿಧಾನಸಭಾ ಚುನಾವಣೆಗೆ ಸಜ್ಜುಗೊಂಡಿರುವ ಗುಜರಾತ್ ನ ಕಛ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದು, ಕಾಂಗ್ರೆಸ್ ನವರು ಕೆಸೆರೆರೆಚಾಟ ನಡೆಸುತ್ತಿದ್ದಾರೆ ಇದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ ಏಕೆಂದರೆ ಕಮಲ ಅರಳುವುದು ಕೆಸರಿನಲ್ಲೇ ಎಂದು ಟಾಂಗ್ ನೀಡಿದ್ದಾರೆ.
ಆಶಾಪುರ ಮಾತಾ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ ಕಚ್ಛೀ ಭಾಷೆಯಲ್ಲೇ ಭಾಷಣ ಮಾಡಿದ್ದು, ಆಶಾಪುರ ದೇಶಿಯ ಬಳಿ ಪ್ರಾರ್ಥಿಸಿ ಬಂದಿದ್ದು, ಈಗ ಜನತಾ ಜನಾರ್ದನನ ಬಳಿ ಆಶೀರ್ವಾದ ಬೇಡುತ್ತಿದ್ದೇವೆ, ಕಛ್ ಜನತೆಯ ಪ್ರೀತಿ ವಿಶ್ವಾಸಗಳಿಗೆ ಆಭಾರಿಯಾಗಿದ್ದೇನೆ, ಜನರೊಂದಿಗೆ ಸಂವಾದ ನಡೆಸುವುದು ನನಗೆ ಅತ್ಯಂತ ಸಂತಸ ನೀಡುತ್ತದೆ. ನನ್ನ ಜೀವನದ ಪ್ರತಿಯೊಂದು ಕ್ಷಣವನ್ನೂ 125 ಕೋಟಿ ಭಾರತೀಯರ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸಿದ್ದೀರಿ, ಇದೇ ಕಾರಣದಿಂದ ಗುಜರಾತ್ ಹಿಂದುಳಿಯುವಂತಾಗಿತ್ತು, ಇದಕ್ಕಾಗಿ ನಿಮ್ಮನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ನೋಟು ನಿಷೇಧದ ವಿಷಯದಲ್ಲಿ ಕಾಂಗ್ರೆಸ್ ಗೆ ಅಸಮಾಧಾನ
ನೋಟು ನಿಷೇಧದಿಂದ ಕಾಂಗ್ರೆಸ್ ನವರಿಗೆ ಅಸಮಾಧಾನವಾಗಿದೆ. ಆದ್ದರಿಂದಲೇ ನನ್ನ ವಿರುದ್ಧ ವಾಗ್ದಾಳಿ ನಡೆಸುತ್ತಿರುತ್ತಾರೆ. ನಾನು ಸರ್ದಾರ್ ಪಟೇಲರು ಜನಿಸಿದ ನಾಡಿನಲ್ಲಿ ಹುಟ್ಟಿ ಬೆಳೆದಿದ್ದೇನೆ, ಬಡವರಿಗೆ ಸೇರಬೇಕಾದ್ದು ಸೇರುವಂತೆ ಮಾಡಿಯೇ ಸಿದ್ಧ, ದೇಶವನ್ನು ಲೂಟಿ ಮಾಡಲು ಬಿಡುವುದಿಲ್ಲ ಎಂಬುದನ್ನು ಕಾಂಗ್ರೆಸ್ ನವರಿಗೆ ಹೇಳಲು ಬಯಸುತ್ತೇನೆ ಎಂದಿದ್ದಾರೆ ಮೋದಿ.
29/11 ರಲ್ಲಿ ಹಾಗೂ ಇತ್ತೀಚೆಗೆ ಉರಿಯಲ್ಲಿ ಭಯೋತ್ಪಾದಕರ ದಾಳಿ ನಡೆದಿತ್ತು, ಎರಡೂ ದಾಳಿಯಲ್ಲಿ ಭಾರತ ಹೇಗೆ ಪ್ರತಿಕ್ರಿಯಿಸಿದೆ ಎಂಬುದನ್ನು ನೀವು ನೋಡಿದ್ದೀರಿ, ಇದು ನಮ್ಮ ಸರ್ಕಾರ ಹಾಗೂ ಕಾಂಗ್ರೆಸ್ ಸರ್ಕಾರದ ನಡುವಿನ ವ್ಯತ್ಯಾಸವನ್ನು ತೋರುತ್ತದೆ ಎಂದಿದ್ದಾರೆ. ಇದೇ ವೇಳೆ ಕಾಂಗ್ರೆಸ್ ನ ವಂಶರಾಜಕಾರಣದ ಬಗ್ಗೆಯೂ ಟೀಕಾಪ್ರಹಾರ ನಡೆಸಿರುವ ಮೋದಿ, " ನಿಮ್ಮ ಭಾಷಣಗಳಲ್ಲಿ ನೆಹರು ಅವರನ್ನೇಕೆ ಉಲ್ಲೇಖಿಸುವುದಿಲ್ಲ ಎಂಬ ಪ್ರಶ್ನೆಗಳನ್ನು ಎದುರಿಸಿದ್ದೇನೆ, ಕಾಂಗ್ರೆಸ್ ನ ಪಕ್ಷದ ಅಧ್ಯಕ್ಷರ ಹೆಸರುಗಳನ್ನು ಬರೆಯಿರಿ ಎಂದು ಕಾಂಗ್ರೆಸ್ ನಾಯಕರನ್ನು ಕೇಳಿದ್ದೆ, ಆದರೆ ಅವರುಗಳಿಗೆ ಬೋಸ್, ಕಾಮರಾಜ್ ನಂತಹ ನಾಯಕರು ನೆನಪೇ ಆಗುವುದಿಲ್ಲ, ಅವರ ಪಕ್ಷದವರ ಹೆಸರುಗಳನ್ನೇ ನೆನಪಿಟ್ಟುಕೊಳ್ಳಲಾಗದವರು ಗುಜರಾತ್ ನ್ನು ಹೇಗೆ ಅರ್ಥಮಾಡಿಕೊಳ್ಳುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos