ರಾಜ್ ಕೋಟ್: "ನಾನು ಜೀವನೋಪಾಯಕ್ಕಾಗಿ ಚಹಾ ಮಾರಿದ್ದೇನೆ, ಆದರೆದ ದೇಶವನ್ನೆಂದೂ ಮಾರಿಲ್ಲ" ಪ್ರಧಾನಿ ಮೋದಿ ಹೇಳಿದ್ದಾರೆ. ಗುಜರಾತಿನಲ್ಲಿ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮೋದಿ ನಾನು ಬಡತನದ ಮೂಲದಿಂದ ಬಂದಿರುವುದು ಕಾಂಗ್ರೆಸ್ ಗೆ ಸಹಿಸಲಾಗುತ್ತಿಲ್ಲ. ಬಡ ಕುಟುಂಬದಿಂದ ಬಂದವರೊಬ್ಬರು ಪ್ರಧಾನಿಯಾದದ್ದನ್ನು ಅವರು ಸಹಿಸುತ್ತಿಲ್ಲ. ಎಂದರು..
ರಾಜ್ ಕೋಟ್ ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಮೋದಿ "ಹೌದು, ನಾನು ಚಹಾವನ್ನು ಮಾರಾಟ ಮಾಡಿದ್ದೇನೆ ಆದರೆ ನಾನು ದೇಶವನ್ನು ಮಾರಾಟ ಮಾಡಲಿಲ್ಲ" ಎಂದರು
ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನಡುವಿನ ರಾಜಕೀಯ ಮೇಲಾಟ ಇನ್ನಷ್ಟು ತಾರಕಕ್ಕೇರಿದ್ದು ಯುವ ಕಾಂಗ್ರೆಸ್ ವಿಭಾಗದ ಆನ್ ಲೈನ್ ಪತ್ರಿಕೆಯೊಂದರಲ್ಲಿ ಪ್ರಧಾನಿ ಮೋದಿ ಅವರನ್ನು ಕಟುವಾಗಿ ಟೀಕೆ ಮಾಡಿತ್ತು.
ಇದೇ ವೇಳೆ 2014 ರಲ್ಲಿ ಮಣಿ ಶಂಕರ್ ಅಯ್ಯರ್ ಮೋದಿ ಅವರನ್ನು ಟೀಕಿಸುತ್ತಾ ಅವರು ಪ್ರಧಾನಿಯಾಗಲಾರರು ಆದರೆ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಚಹಾ ಮಾರಾಟ ಮಾಡುತ್ತಾರೆ ಎಂದಿದ್ದರು. ಇದೀಗ ಮೋದಿ ಅವರ ಹೇಳಿಕೆಯನ್ನು ಉಲ್ಲೇಖಿಸಿ "ಕಾಂಗ್ರೆಸ್ ಪಕ್ಷವು ಗುಜರಾತಿಗಳು ನಾಯಕರಾಗುವುದನ್ನು ಸಹಿಸಲಾರದು.
"ಪಟೇಲ್ ಸಮುದಾಯದ ಒಬ್ಬ ಬಾಬುಭಾಯ್ ಪಟೇಲ್ ಅವರು ಮುಖ್ಯಮಂತ್ರ್೪ಇಯಾಗಿದ್ದರೆ ಇದು ಜನ ಸಂಘದ ಬೆಂಬಲದೊಂದಿಗೆ ಆಗಿದೆ. ಕಾಂಗ್ರೆಸ್ ಇದನ್ನು ಸಹಿಸಲಿಲ್ಲ, ಆದರೆ ಬಾಬುಭಾಯ್ ಜಶು ಭಾಯಿ ಸರ್ಕಾರಕ್ಕೆ ಇದರಿಂದ ತೊಂದರೆಯಾಗಿಲ್ಲ. ಇದಾಗಿ ಸೌರಾಷ್ಟ್ರದ ಮಗನಾದ ಕೇಶುಭಾಯಿ ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದಾಗ, ಕಾಂಗ್ರೆಸ್ ಅವರನ್ನು ಹಿಮ್ಮೆಟ್ಟಿಸಲು ಸಾಕಷ್ಟು ಪ್ರಯತ್ನ ನಡೆಸಿತು. ಕಡೆಗೆ ಆನಂದಿಬೆನ್ ಪಟೇಲ್ ಅವಧಿಯಲ್ಲಿಯೂ ಕಾಂಗ್ರೆಸ್ ಇದನ್ನೇ ಪುನರಾವರ್ತಿಸಿತು.ಹೀಗೆ ಕಾಂಗ್ರೆಸ್ ಎಂದಿಗೂ ಗುಜರಾತನ್ನು ಹಿಮ್ಮೆಟ್ಟಿಸುತ್ತಲೇ ಬಂದಿದೆ." ಮೋದಿ ಹೇಳಿದರು.