ದೇಶ

ಮಹಿಳೆಯರಿಗೆ ಸ್ವಂತ ಉದ್ದಿಮೆ ಆರಂಭಿಸಲು ತಂತ್ರಜ್ಞಾನ ಸಹಾಯ ಮಾಡುತ್ತದೆ: ಇವಾಂಕಾ ಟ್ರಂಪ್

Sumana Upadhyaya

ಹೈದರಾಬಾದ್: ತಂತ್ರಜ್ಞಾನಗಳು ಮಹಿಳೆಯರಿಗೆ ಸ್ವಂತ ಉದ್ದಿಮೆ, ವ್ಯಾಪಾರ ವಹಿವಾಟುಗಳನ್ನು ಆರಂಭಿಸಲು  ಮತ್ತು ಆಧುನಿಕ ಉದ್ಯೋಗಸ್ಥ ಕುಟುಂಬಗಳಿಗೆ ಕೆಲಸದಲ್ಲಿ ಸಡಿಲತೆ ನೀಡಲು  ಸಹಾಯವಾಗಬಹುದು ಎಂದು  ಡೊನಾಲ್ಡಾ ಟ್ರಂಪ್ ಪುತ್ರಿ ಹಾಗೂ ಅವರ ಸಲಹೆಗಾರ್ತಿ ಇವಾಂಕಾ ಟ್ರಂಪ್ ಇಂದು  ಹೈದರಾಬಾದ್ ನಲ್ಲಿ ಉದ್ಯಮಿಗಳ ಸಮಾವೇಶದಲ್ಲಿ ಹೇಳಿದ್ದಾರೆ.

ಆಧುನಿಕ ತಂತ್ರಜ್ಞಾನಗಳು ಮಹಿಳೆಯರಿಗೆ  ವೈಯಕ್ತಿಕವಾಗಿ ಮತ್ತು ವೃತ್ತಿಯಲ್ಲಿ ಕೂಡ ಉಪಯೋಗವಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಹಿಳಾ ಉದ್ಯಮಿಗಳಿಗೆ ತಂತ್ರಜ್ಞಾನ ಹಲವಾರು ಅವಕಾಶಗಳನ್ನು ಒದಗಿಸುತ್ತದೆ. ಜಾಗತಿಕ ಮುಕ್ತ ಸಮಾಜದಲ್ಲಿ ದೇಶೀಯ ಬೆಳವಣಿಗೆಗೆ ಕೂಡ ಇದರಿಂದ ಅನುಕೂಲವಿದೆ ಎಂದು ಜಾಗತಿಕ ಉದ್ಯಮಿಗಳ ಸಮಾವೇಶದ 8ನೇ ಆವೃತ್ತಿಯಲ್ಲಿ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಹೇಳಿದರು.

ಅಡೆತಡೆಗಳನ್ನು ಕಡಿಮೆಮಾಡಿ ಮಹಿಳೆಯರಿಗೆ ಹೆಚ್ಚು ಅನುಕೂಲಮಾಡಿಕೊಡಲು, ಸಶಕ್ತೀಕರಣಕ್ಕೆ ತಂತ್ರಜ್ಞಾನ  ಸಹಾಯವಾಗಲಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ವೈಯಕ್ತಿಕವಾಗಿ ಮತ್ತು ವೃತ್ತಿಪರರಾಗಿ ಜೀವನವನ್ನು ಸರಿತೂಗಿಸಲು ಪ್ರಯತ್ನಿಸುತ್ತಿರುವ ಕ್ರಮ ಶ್ಲಾಘನೀಯ. ಸಮಾಜದಲ್ಲಿ ಮೂಲಭೂತ ವ್ಯವಸ್ಥೆಯಲ್ಲಿ ಬದಲಾವಣೆಯಾದರೆ ಮಹಿಳೆಯರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.

SCROLL FOR NEXT