ಅರುಣ್ ಜೇಟ್ಲಿ 
ದೇಶ

ಸರ್ಕಾರವು ಪ್ರತಿವರ್ಷ 10,000 ಕಿ.ಮೀ ಹೆದ್ದಾರಿ ನಿರ್ಮಾಣಕ್ಕೆ ಅನುಮೋದನೆ ನೀಡುತ್ತದೆ: ಅರುಣ್ ಜೇಟ್ಲಿ

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಭಾರತವೂ ಒಂದಾಗಿದ್ದು ವಾರ್ಷಿಕವಾಗಿ ಶೇ. ಏಳರಿಂದ ಎಂಟರಷ್ಟು ಪ್ರಗತಿ ದಾಖಲಿಸುತ್ತಿದೆ ಎಂದಿದ್ದಾರೆ.

ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಭಾರತವೂ ಒಂದಾಗಿದ್ದು ವಾರ್ಷಿಕವಾಗಿ ಶೇ. ಏಳರಿಂದ ಎಂಟರಷ್ಟು ಪ್ರಗತಿ ದಾಖಲಿಸುತ್ತಿದೆ ಎಂದಿದ್ದಾರೆ.
"ಮುಂದಿನ ಎರಡು ದಶಕಗಳಲ್ಲಿ ಭಾರತವು ತನ್ನ ಮೂಲಭೂತ ಸೌಕರ್ಯಗಳನ್ನು ನವೀಕರಿಸುವ ಅಗತ್ಯವಿದೆ, ಇದಕ್ಕಾಗಿ ಸಾಕಷ್ಟು ಹೂಡಿಕೆ ಮತ್ತು ಖರ್ಚು ಮಾಡುವುದು ಅಗತ್ಯವಾಗಿದೆ. ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ಮೂಲಸೌಕರ್ಯಗಳು ಅಭಿವೃದ್ಧಿಯಾಗುತ್ತಿದೆ"  'ಜಾಗತಿಕ ಮಟ್ಟದ ಮೂಲಸೌಕರ್ಯಕ್ಕಾಗಿ ಭಾರತದ ರಸ್ತೆಮಾರ್ಗ' ಕುರಿತು ಡಿಫೆನ್ಸ್ ಎಸ್ಟೇಟ್ ದಿನಾಚರಣೆ ಭಾಷಣದಲ್ಲಿ ಜೇಟ್ಲಿ ಮಾತನಾಡಿದರು.
ಭಾರತವು ಹೆಚ್ಚು ಮಹತ್ವಾಕಾಂಕ್ಷೆಯ ರಾಷ್ಟ್ರವಾಗಿ ಬದಲಾಗುತ್ತಿದೆ,  ಇದೊಂದು ಸಕಾರಾತ್ಮಕ ಬದಲಾವಣೆಯಾಗಿ ಕಾಣುತ್ತಿದೆ, ಸರ್ಕಾರವು 2007 ರಿಂದ 2017 ರವರೆಗೆ ಮೂಲಭೂತ ಸೌಕರ್ಯಗಳ ಮೇಲೆ ರೂ. 60,000 ಲಕ್ಷ ಕೋಟಿ ರೂ.  ಹೂಡಿಕೆ ಮಾಡಿದೆ. ನಾವು ರಾಷ್ಟ್ರೀಯ ಮೂಲಸೌಕರ್ಯ ಹೂಡಿಕೆ ನಿಧಿಯನ್ನು ರಚಿಸಿದ್ದೇವೆ, ಇದರಲ್ಲಿ ಸರ್ಕಾರ. ಹೂಡಿಕೆ ಮಾಡಿದೆ ಮತ್ತು ವಿದೇಶಿ ಹೂಡಿಕೆದಾರರಿಂದ ಬಂಡವಾಳ ಹೂಡಿಕೆ ಮಾಡಿಸಲಾಗುತ್ತಿದೆ, ಜೇಟ್ಲಿ ವಿವರಿಸಿದರು. 
ಮೂಲಭೂತ ಸೌಕರ್ಯ ಕ್ಷೇತ್ರಕ್ಕೆ ಮುಂದಿನ ಐದು ವರ್ಷಗಳಲ್ಲಿ ರೂ 50,000 ಕೋಟಿ ಮೌಲ್ಯದ ಬಂಡವಾಳ ಹರಿದುಬರಲಿರುವ ಸೂಚನೆಯನ್ನು ಜೇಟ್ಲಿ ನೀಡಿದ್ದಾರೆ. ಜತೆಗೆ, ಪ್ರತಿ ವರ್ಷ ಹೆದ್ದಾರಿಗಳ ನಿರ್ಮಾಣಕ್ಕಾಗಿ ಮಾಡಿದ್ದ ವೆಚ್ಚದ ಬಗ್ಗೆಯೂ ಜೇಟ್ಲಿ ಮಾತನಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್