ದೇಶ

ದಲಿತ ಯುವಕರು ರಮ್ ಗಾಗಿ ಸೇನೆಗೆ ಸೇರಲಿ: ಸಚಿವ ರಾಮದಾಸ್ ಅತವಾಲೆ ವಿವಾದಾತ್ಮಕ ಹೇಳಿಕೆ

Lingaraj Badiger
ಪುಣೆ: ದಲಿತ ಯುವಕರು ದೇಶಿ ಮದ್ಯ ಕುಡಿಯುವ ಬದಲು ಉತ್ತಮ ಆಹಾರ ಮತ್ತು ವಿದೇಶಿ ಮದ್ಯಕ್ಕಾಗಿ ಸೇನೆಗೆ ಸೇರಲಿ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅತವಾಲೆ ಅವರು ಸೋಮವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಂದು ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಅತವಾಲೆ, ಸೇನೆ ಉತ್ತಮ ಆಹಾರ ಮತ್ತು ಮದ್ಯ ಒದಗಿಸುತ್ತದೆ. ದಲಿತ ಯುವಕರು ದೇಶಿ ಮದ್ಯ ಸೇವಿಸಿ ನಿರುದ್ಯೋಗಿಗಳಾಗುವ ಬದಲು ಶಸ್ತ್ರ ಸಜ್ಜಿತ ಸೇನೆಗೆ ಸೇರಲಿ. ಅಲ್ಲಿ ಅವರಿಗೆ ಉಚಿತವಾಗಿ ರಮ್ ಸಿಗುತ್ತದೆ ಎಂದಿದ್ದಾರೆ.
ಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ದಲಿತರಿಗೆ ಮೀಸಲಾತಿ ನೀಡಬೇಕು ಎಂದು ನಾವು ಒತ್ತಾಯಿಸಿದ್ದೇವೆ. ದಲಿತ ಸಮುದಾಯದಲ್ಲಿ ಸಾಕಷ್ಟು ಜನ ಹೋರಾಟಗಾರರಿದ್ದು, ಅವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧರಿದ್ದಾರೆ ಎಂದು ಅತವಾಲೆ ಹೇಳಿದ್ದಾರೆ.
ಸೇನೆಯಲ್ಲೂ ದಲಿತರಿಗೆ ಮೀಸಲಾತಿ ನೀಡಬೇಕು ಎಂಬುದು ನಮ್ಮ ಪಕ್ಷದ ಬಹುದಿನಗಳ ಬೇಡಿಕೆಯಾಗಿದ್ದು, ಈ ಸಂಬಂಧ ಶೀಘ್ರದಲ್ಲೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡುವುದಾಗಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ(ಆರ್ ಪಿಐ) ಅಧ್ಯಕ್ಷ ರಾಮದಾಸ್ ಅತವಾಲೆ ಅವರು ತಿಳಿಸಿದ್ದಾರೆ.
SCROLL FOR NEXT