ದೇಶ

ಮಹಾತ್ಮಾ ಗಾಂಧಿಯವರ ದೃಷ್ಟಿಕೋನವು ಹಿಂದಿಗಿಂತ ಇಂದು ಹೆಚ್ಚು ಪ್ರಸ್ತುತ: ಅಮಿತ್ ಷಾ

Sumana Upadhyaya
ಪೋರಬಂದರ್(ಗುಜರಾತ್): ದೇಶದ ಪಿತಾಮಹ ಮಹಾತ್ಮಾ ಗಾಂಧಿಯವರ 148ನೇ ಜಯಂತಿ ಅಂಗವಾಗಿ ಗುಜರಾತ್ ನ ಪೋರಬಂದರ್ ನಲ್ಲಿರುವ ಕೀರ್ತಿ ಮಂದಿರದಲ್ಲಿ ಗೌರವ ನಮನ ಸಲ್ಲಿಸಿದ ಭಾರತೀಯ ಜನತಾ ಪಾರ್ಟಿಯ ಮುಖ್ಯಸ್ಥ ಅಮಿತ್ ಶಾ, ಗಾಂಧೀಜಿಯವರ ದೃಷ್ಟಿಕೋನವು ಹಿಂದಿಗಿಂತ ಇಂದಿನ ಕಾಲಕ್ಕೆ ಹೆಚ್ಚು ಪ್ರಸ್ತುತ ಎನಿಸುತ್ತಿದೆ ಎಂದು ಹೇಳಿದ್ದಾರೆ.
ಗಾಂಧೀಜಿಯವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಲು ಜನರು ಪ್ರತಿಜ್ಞೆ ಸ್ವೀಕರಿಸಬೇಕು ಎಂದು ಹೇಳಿದರು. 
ಗಾಂಧೀಜಿಯವರ ದೂರದೃಷ್ಟಿ ಇಂದಿನ ಕಾಲಕ್ಕೆ ಹೆಚ್ಚು ಪ್ರಸ್ತುತ ಎನಿಸುತ್ತದೆ. ಗಾಂಧೀಜಿಯವರು ನೀಡಿರುವ ಸಂದೇಶಗಳಿಗೆ ವಿಶ್ವದ ಮತ್ತು ದೇಶದ ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯವಿದೆ. ಮಹಾತ್ಮಾ ಗಾಂಧಿಯವರ ಮಾರ್ಗದಲ್ಲಿ ನಡೆಯಲು ನಾವೆಲ್ಲರೂ ಪ್ರಮಾಣ ಮಾಡಬೇಕು ಎಂದು ಹೇಳಿದರು.
ಮೋಹನ್ ದಾಸ್ ಕರಮಚಂದ ಗಾಂಧಿಯವರು ಅಕ್ಟೋಬರ್ 2, 1869ರಲ್ಲಿ ಗುಜರಾತ್ ನ ಪೋರಬಂದರ್ ನಲ್ಲಿ ಜನಿಸಿದರು. ಭಾರತದ ರಾಜಕೀಯ ಮತ್ತು ಧಾರ್ಮಿಕ ಮುಖಂಡರಾಗಿದ್ದ ಗಾಂಧಿಯವರು ಸ್ವಾತಂತ್ರ್ಯ ಚಳವಳಿಯ ಮುಂದಾಳತ್ವ ವಹಿಸಿದ್ದರು. ಅವರ ಅಹಿಂಸಾ ಚಳವಳಿಯಾದ ಸತ್ಯಾಗ್ರಹ ಭಾರೀ ಜನಪ್ರಿಯತೆ ಗಳಿಸಿತ್ತು. ಭಾರತ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಅಹಿಂಸಾತ್ಮಕ ನಾಗರಿಕ ಅಸಹಕಾರಕ್ಕೆ ಗಾಂಧೀಜಿ ಹೆಸರುವಾಸಿಯಾದರು. 1922ರಲ್ಲಿ ಅಸಹಕಾರ ಚಳವಳಿ ಮತ್ತು 1030ರ ಮಾರ್ಚ್ 12ರಂದು ನಡೆಸಿದ ಉಪ್ಪಿನ ಸತ್ಯಾಗ್ರಹ ಅಥವಾ ದಂಡಿ ಸತ್ಯಾಗ್ರಹ ಕೂಡ ಜನಪ್ರಿಯ.
ಮಹಾತ್ಮಾ ಗಾಂಧಿಯವರ ಸತತ ಪ್ರಯತ್ನದಿಂದಾಗಿ ಭಾರತ ಕೊನೆಗೂ ಆಗಸ್ಟ್ 15, 1947ರಂದು ಸ್ವಾತಂತ್ರ್ಯ ಗಳಿಸಿತು. ಅವರನ್ನು 1948, ಜನವರಿ 30ರಂದು ದೆಹಲಿಯಲ್ಲಿ ಹತ್ಯೆ ಮಾಡಲಾಗಿತ್ತು.
SCROLL FOR NEXT