ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಪಕ್ಷದ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅಧಿಕಾರ ಸ್ವೀಕರಿಸುತ್ತಾರೆ: ಕಾಂಗ್ರೆಸ್

ಪಕ್ಷದ ಅಧ್ಯಕ್ಷರಾಗಿ ಸೋನಿಯಾ ಗಾಂಧಿಯವರ ಪುತ್ರ ರಾಹುಲ್ ಗಾಂಧಿಯವರು ಶೀಘ್ರದಲ್ಲಿಯೇ ಅಧಿಕಾರ ಸ್ವೀಕರಿಸುತ್ತಾರೆಂದು ಕಾಂಗ್ರೆಸ್ ಸೋಮವಾರ ಹೇಳಿದೆ...

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
Manjula VN
Updated On : 2 Oct 2017, 10:29 am
ನವದೆಹಲಿ: ಪಕ್ಷದ ಅಧ್ಯಕ್ಷರಾಗಿ ಸೋನಿಯಾ ಗಾಂಧಿಯವರ ಪುತ್ರ ರಾಹುಲ್ ಗಾಂಧಿಯವರು ಶೀಘ್ರದಲ್ಲಿಯೇ ಅಧಿಕಾರ ಸ್ವೀಕರಿಸುತ್ತಾರೆಂದು ಕಾಂಗ್ರೆಸ್ ಸೋಮವಾರ ಹೇಳಿದೆ, 
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರು, ರಾಹುಲ್ ಯಾವಾಗ ಅಧಿಕಾರ ಸ್ವೀಕರಿಸುತ್ತಾರೆಂಬುದರ ಬಗ್ಗೆ ದಿನಾಂಕ ನಿಗದಿಯಾಗಿಲ್ಲ. ಆದರೆ, ರಾಹುಲ್ ಅವರೇ ಪಕ್ಷದ ಅಧ್ಯಕ್ಷರಾಗುವುದು ಖಚಿತ. ಪಕ್ಷದ ಚುನಾವಣೆ ನಡೆಸಲು ವ್ಯವಸ್ಥೆ ಹಾಗೂ ನಿಯಮಗಳಿವೆ. ವ್ಯವಸ್ಥೆಗಳು ಪೂರ್ಣಗೊಂಡ ಬಳಿಕ ಪಕ್ಷದ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ರಾಹುಲ್ ಗಾಂಧಿಯವರ ನಮ್ಮ ಅಧ್ಯಕ್ಷರಾಬೇಕೆಂದು ಕಾಂಗ್ರೆಸ್ ನಲ್ಲಿರುವ ಪ್ರತೀಯೊಬ್ಬರು ಬಯಸಿದ್ದಾರೆ ಎಂದು ಹೇಳಿದ್ದಾರೆ. 
ಇದರಂತೆ ಮತ್ತೊಬ್ಬ ಕಾಂಗ್ರೆಸ್ ನಾಯಕ ಸಚಿನ್ ಪಿಲೊಟ್ ಅವರು ಮಾತನಾಡಿ, ಈ ವರ್ಷದ ದೀಪಾವಳಿ ಹಬ್ಬದ ಬಳಿಕ ರಾಹುಲ್ ಗಾಂಧಿಯವರೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಾರೆಂದು ತಿಳಿಸಿದ್ದಾರೆ. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement