ದೇಶ

1975ರ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಕಚ್ಚಾ ತೈಲ ಪೂರೈಸಿದ ಅಮೆರಿಕ

Raghavendra Adiga
ನವದೆಹಲಿ: ಅಮೆರಿಕಾದೊಡನೆ ಭಾರತ ಮಾಡಿಕೊಂಡಿದ್ದ ಎರಡು ದಶಲಕ್ಷ ಬ್ಯಾರಲ್ ಗಳ ಕಚ್ಚಾ ತೈಲ ಆಮದು  ಒಡಂಬಡಿಕೆಯ ಮೊದಲ ಭಾಗವಾಗಿ  ಇಂದು ಒಒಡಿಶಾದ ಪ್ಯಾರಾದೀಪ್ ಬಂದರಿನ ಮೂಲಕ ಅಮೆರಿಕದ  ಭಾರತಕ್ಕೆ ಮೊದಲ ಕಚ್ಚಾ ತೈಲ ಸರಬರಾಜು ಮಾಡಿದೆ.
ಭಾರತೀಯ ತೈಲ ನಿಗಮ (ಐಒಸಿ) ಮತ್ತು ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್) ಅಮೆರಿಕಾ ತೈಲ ಆಮದು ಒಪ್ಪಂದದಂತೆ ಕಚ್ಚಾ ತೈಲವನ್ನು ಖರೀದಿಸುತ್ತಿವೆ. ಎರಡೂ ಸಂಸ್ಥೆಗಳು ಅಮೆರಿಕಾ ದಿಂದ  2 ದಶಲಕ್ಷ ಬ್ಯಾರಲ್ ಕಚ್ಚಾ ತೈಲಕ್ಕೆ ಬೇಡಿಕೆ ಸಲ್ಲಿಸಿವೆ. ಭಾರತಕ್ಕೆ ಅಮೆರಿಕಾ  ಕಚ್ಚಾ ತೈಲ ಆಮದು ಎರಡು ದೇಶಗಳ ದ್ವಿಪಕ್ಷೀಯ ವ್ಯಾಪಾರವನ್ನು 2 ಬಿಲಿಯನ್ ಡಾಲರ್ ವರೆಗೆ  ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿವೆ.
ಹೈದರಾಬಾದ್ ನ ಆಮೆರಿಕಾ ಕೌನ್ಸಿಲ್ ಜನರಲ್ ಕ್ಯಾಥರೀನ್ ಹದ್ದಾ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಿಂದ ಅಂತರರಾಷ್ಟ್ರೀಯ ಸಹಕಾರಕ್ಕಾಗಿ ಜಂಟಿ ಕಾರ್ಯದರ್ಶಿ,ಸಂಜಯ್ ಸುಧೀರ್, ಅಮೆರಿಕಾ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ಮುನು ಮಹಾವರ್ ಇಂದು ಪ್ಯಾರಾದೀಪ್ ಬಂದರಿಗೆ ಭೇಟಿ ನೀಡಿದ್ದಾರೆಂದು ಅಮೆರಿಕಾ ರಾಯಭಾರ ಕಛೇರಿ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.
1975 ರಲ್ಲಿ ಅಮೆರಿಕಾ ಭಾರತಕ್ಕೆ ತೈಲ ಸಾಗಣೆಯನ್ನು ನಿಲ್ಲಿಸಿದ ನಂತರ ಇದು ಮೊದಲ ತೈಲ ಆಮದು ಎನಿಸಿದೆ.
ನವ ದೆಹಲಿಯ ಅಮೆರಿಕಾ ರಾಯಭಾರ ಕಛೇರಿಯಲ್ಲಿರುವ ಚಾರ್ಜ್ ಡಿ'ಅಫೈರೆಸ್, ಮೇರಿ ಕೆ ಕಾರ್ಲ್ಸನ್, "ಇದು ಅಮೆರಿಕಾ ಮತ್ತು ಭಾರತ ನಡುವಿನ ಪಾಲುದಾರಿಕೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಅಮೆರಿಕಾ ಮತ್ತು ಭಾರತ  ಇಂಧನ ಕ್ಷೇತ್ರದಲ್ಲಿನ ಸಹಕಾರವನ್ನು ಈ ಮೂಲಕ ವಿಸ್ತರಿಸಲಿದೆ,  ಭಾರತದಲ್ಲಿ ನೈಸರ್ಗಿಕ ಅನಿಲದ ಉಪಯೋಗವನ್ನು ಹೆಚ್ಚಿಸಲು ಅಮೆರಿಕದ ಕಚ್ಚಾ ಮತ್ತು ಪರಿಷ್ಕರಿಸಿದ ತೈಲ ಮಾರಾಟಕ್ಕೆ ನಾವು ಒತ್ತು ನೀಡುತ್ತೇವೆ. ನಾವು ಒಟ್ಟಿಗೆ ಕೆಲಸ ಮಾಡಲು ಎದುರು ನೋಡುತ್ತೇವೆ. "
ಜೂ.26 ರಂದು ವಾಷಿಂಗ್ ಟನ್ ನಲ್ಲಿ ನಡೆದ ಸಭೆಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸ್ಟ್ರಾಟಜಿಕ್ ಎನರ್ಜಿ ಪಾಲುದಾರಿಕೆಯ ಮೂಲಕ ದ್ವಿಪಕ್ಷೀಯ ಶಕ್ತಿ ಸಹಕಾರವನ್ನು ವಿಸ್ತರಿಸುವ, ಪರಿಸರ ಮತ್ತು ಹವಾಮಾನ ನೀತಿ, ಜಾಗತಿಕ ಆರ್ಥಿಕ ಅಭಿವೃದ್ಧಿ, ಮತ್ತು ಭದ್ರತೆಯ ಅಗತ್ಯಗಳನ್ನು ಸಮತೋಲನಗೊಳಿಸುವ ಒಪ್ಪಂದಗಳನ್ನು ಮಾಡಿಕೊಂಡಿದ್ದರು.
SCROLL FOR NEXT