ದೇಶ

ಯೋಧರ ಸಮಯ ಪ್ರಜ್ಞೆಯಿಂದ ದೊಡ್ಡ ದುರಂತ ತಪ್ಪಿದೆ: ರಕ್ಷಣಾ ತಜ್ಞ

Manjula VN
ನವದೆಹಲಿ: ಶ್ರೀನಗರ ವಿಮಾನ ನಿಲ್ದಾಣದ ಸಮೀಪವಿರುವ ಬಿಎಸ್ಎಫ್ ಕ್ಯಾಂಪ್ ಮೇಲಿನ ಆತ್ಮಾಹುತಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರರ ವಿರುದ್ಧ ಭಾರೀ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಸೇನೆಯನ್ನು ರಕ್ಷಣಾ ತಜ್ಞ ಉದಯ್ ಭಾಸ್ಕರ್ ಅವರು ಕೊಂಡಾಡಿದ್ದಾರೆ. 
ಉಗ್ರರ ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಬಿಎಸ್ಎಫ್ ಕ್ಯಾಂಪ್ ಮೇಲೆ ಮೂವರು ಉಗ್ರರು ದಾಳಿ ನಡೆಸಿದ್ದು, ಉಗ್ರರ ದಾಳಿಗೆ ಭಾರತೀಯ ಸೇನೆ ದಿಟ್ಟ ಉತ್ತರವನ್ನು ನೀಡುತ್ತಿದೆ. ಯೋಧರ ಸಮಯ ಪ್ರಜ್ಞೆಯಿಂದಾಗಿ ಸಂಭವಿಸಬೇಕಾಗಿದ್ದ ದೊಡ್ಡ ದುರಂತಗಳು ತಪ್ಪುತ್ತಿವೆ ಎಂದು ಹೇಳಿದ್ದಾರೆ. 
ಕಳೆದ ಹಲವು ವರ್ಷಗಳಿಂದಲೂ ಉಗ್ರರು ಭಾರತದ ಮೇಲೆ ಪದೇ ಪದೇ ದಾಳಿ ನಡೆಸುತ್ತಿದ್ದಾರೆ. ಉಗ್ರರು ಪದೇ ಪದೇ ದಾಳಿ ನಡೆಸುತ್ತಿರುವುದರಿಂದ ಭಾರತೀಯ ಯೋಧರು ಸದಾಕಾಲ ಹೋರಾಟ ಮಾಡಲು ಸಿದ್ಧರಿರುವಂತಾಗಿದೆ. ಯೋಧರ ಸಮಯ ಪ್ರಜ್ಞೆಗಳಿಂದಾಗಿಯೇ ದಾಳಿ ನಡೆಸುವ ಉಗ್ರರು ಯಾರ ಗುರ್ತಿಕೆಗಳು ಪತ್ತೆಯಾಗುತ್ತಿವೆ ಎಂದು ತಿಳಿಸಿದ್ದಾರೆ. 
ಭಾರತದಲ್ಲಿ ದಸರಾ ಹಾಗೂ ದೀಪಾವಳಿಯಂತಹ ಹಬ್ಬಗಳ ದಿನಗಳು ಬಂತೆಂದರೆ ಸಾಕು ಉಗ್ರರು ದಾಳಿ ನಡೆಸಲು ಆರಂಭಿಸುತ್ತಾರೆ. ಹಬ್ಬದ ದಿನಗಳಲ್ಲಿ ದೇಶದಲ್ಲಿ ರಕ್ತದೋಕುಳಿ ನಡೆಸಲು ಉಗ್ರರು ಸಂಚು ರೂಪಿಸುತ್ತಿರುತ್ತಾರೆ. ಇದು ಸಾಮಾನ್ಯವಾಗಿ ಹೋಗಿದೆ ಎಂದಿದ್ದಾರೆ. 
SCROLL FOR NEXT