ಇಟಾನಗರ: ನಿವೃತ್ತ ಬ್ರಿಗೇಡಿಯರ್ ಬಿ.ಡಿ ಮಿಶ್ರಾ ಇಂದು ಅರುಣಾಚಲ ಪ್ರದೇಶ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಗುವಾಹಟಿ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಅಜಿತ್ ಸಿಂಗ್ ಇಲ್ಲಿನ ರಾಜಭವನದಲ್ಲಿ ಪ್ರಮಾಣ ವಚನ ಬೋಧಿಸಿದರು.
ಅರುಣಾಚಲ ಪ್ರದೇಶ ಉಪಮುಖ್ಯಮಂತ್ರಿ ಚೌಹ್ನಾ ಮೈನ್ ಕೇಂದ್ರ ಸಚಿವ ಕಿರೆಣ್ ರಿಜಿಜು, ವಿಧಾನ ಸಭೆ ಸ್ಪೀಕರ್ ಟಿ.ಎನ್ ತಂಗ್ಡೋಕ್, ಸೇರಿದಂತೆ ಹಲವು ಸಚಿವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಬಿ.ಡಿ ಮಿಶ್ರಾ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, 1962, 1965, ಹಾಗೂ 1971ರ ನಡೆದ ಪ್ರಮುಖ ಯುದ್ದಗಳಲ್ಲಿ ಪಾಲ್ಗೋಂಡಿದ್ದರು,
ನಾಗಾಲ್ಯಾಂಡ್ ರಾಜ್ಯಪಾಲ ಪದ್ಮನಾಭ ಬಾಲಕೃಷ್ಣ ಆಚಾರ್ಯ ಅವರಿಂದ ಅಧಿಕಾರ ಸ್ವೀಕರಿಸಿದ್ದಾರೆ, ನಾಗಲ್ಯಾಂಡ್ ಗವರ್ನರ್ ಪದ್ಮನಾಭ ಅರುಣಾಚಲ ಪ್ರದೇಶದ ಹೆಚ್ಚುವರಿ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಇದಕ್ಕೂ ಮುನ್ನ ರಾಜ್ಯಪಾಲರಾಗಿದ್ದ ವಿ. ಷಣ್ಮುಗಂ ಜನವರಿ 26 ರಂದು ರಾಜಿನಾಮೆ ನೀಡಿದ್ದರು.ರಾಜಭವನದ 100 ಸಿಬ್ಬಂದಿ ರಾಷ್ಟ್ರಪತಿ ಭವನಕ್ಕೆ ಪತ್ರ ಬರೆದು ರಾಜ್ಯ ಪಾಲರ ವಿರುದ್ಧ ಅಹಿತಕರ ನಡವಳಿಕೆ ಸಂಬಂಧ ಆರೋಪಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics