ಮೀರತ್: ಪ್ರಧಾನಿ ನರೇಂದ್ರ ಮೋದಿ ಅವರ 100 ಅಡಿ ಎತ್ತರದ ಪ್ರತಿಮೆಯೊಂದಿಗೆ ಮೀರತ್ ನ ಸಾರ್ಧಾನಾ ಪ್ರದೇಶದಲ್ಲಿ ದೇವಾಲಯವೊಂದು ನಿರ್ಮಾಣವಾಗಲಿದೆ.
ಉತ್ತರ ಪ್ರದೇಶದ ಜಲ ಇಲಾಖೆಯ ನಿವೃತ್ತ ಸಹಾಯಕ ಎಂಜಿನಿಯರ್ ಜೆಪಿ ಸಿಂಗ್ ಅವರು ಮೋದಿ ಪ್ರತಿಮೆಯನ್ನು ಅನಾವರಣಗೊಳಿಸುವುದಾಗಿ ಹೇಳಿದ್ದು ಇದಕ್ಕೆ ಸುಮಾರು 10 ಕೋಟಿ ವೆಚ್ಚವಾಗಲಿದೆ.
ಮೋದಿ ಮಂದಿರ ನಿರ್ಮಾಣಕ್ಕಾಗಿ ಮೀರತ್-ಕರ್ನಲ್ ಹೆದ್ದಾರಿಯಲ್ಲಿ 5 ಎಕರೆ ಜಮೀನನ್ನು ಖರೀದಿಸಲಾಗಿದ್ದು ಅಕ್ಟೋಬರ್ 23ರಂದು ಭೂಮಿ ಪೂಜೆ ನೆರವೇರಲಿದೆ ಎಂದು ಹೇಳಿದರು.
2015ರ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೊಟ್ಟಮೊದಲ ದೇವಾಲಯ ಗುಜರಾತಿನ ರಾಜ್ ಕೋಟ್ ನಲ್ಲಿ ನಿರ್ಮಾಣಗೊಂಡಿತ್ತು.