ಹೈದರಾಬಾದ್ ನಲ್ಲಿ ಧಾರಾಕಾರ ಮಳೆ, ಮೂರು ಸಾವು 
ದೇಶ

ಹೈದರಾಬಾದ್ ನಲ್ಲಿ ಧಾರಾಕಾರ ಮಳೆ, ಮೂರು ಸಾವು

ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಎಂಟು ತಿಂಗಳ ಮಗು ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಹೈದರಾಬಾದ್: ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಎಂಟು ತಿಂಗಳ ಮಗು ಸೇರಿದಂತೆ ಮೂವರು  ಸಾವನ್ನಪ್ಪಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ನಗರದಲ್ಲಿ ಸೋಮವಾರ ಸಂಜೆ ವೇಳೆ ಭಾರಿ ಗಾಳಿ ಮಳೆ ಸುರಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಒಂದು ಮಗು, ಮಗುವಿನ ತಂದೆ ಮಳೆಯಿಂದ ಗೋಡೆ ಕುಸಿದು ಮರಣ ಹೊಂದಿದ್ದರೆ ಇನ್ನೊಬ್ಬ  ವ್ಯಕ್ತಿ ವಿದ್ಯುತ್ ಆಗಾತದಿಂದ ಸಾವನ್ನಪ್ಪಿದ್ದಾನೆ.
ಬಂಜಾರ ಹಿಲ್ಸ್ ಪೊಲೀಸ್ ಠಾಣೆಯ ಎಸ್ ಎಚ್ ಓ ಪ್ರಕಾರ, 35 ವರ್ಷ ವಯಸ್ಸಿನ ಯಾದುಲು ಮತ್ತು ಅವರ ಎಂಟು ತಿಂಗಳ ಮಗು ಮನೆಯಲ್ಲಿ ಮಲಗಿದ್ದಾಗ ಭಾರಿ ಮಳೆ ಕಾರಣ ಗೋಡೆಯ ಕುಸಿದು ಸಾವನ್ನಪ್ಪಿದ್ದರು ದೇಹಗಳನ್ನು ಅವರ  ಮರಣೋತ್ತರ ಪರೀಕ್ಷೆಗಾಗಿ ಕಳಿಸಲಾಗಿದೆ..
ಮತ್ತೊಂದು ಘಟನೆಯಲ್ಲಿ, 35 ವರ್ಷದ ವ್ಯಕ್ತಿ ವಿದ್ಯುದಾಘಾತಕ್ಕೊಳಗಾದರು ಮತ್ತು ವಿದ್ಯುತ್ ತಂತಿಯೊಂದಿಗೆ ಸಂಪರ್ಕ ಹೊಂದಿದ್ದ ಟ್ರಾಲಿಯನ್ನು ಮುಟ್ಟಿದ ಕಾರಣ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಾಯುಭಾರ ಕುಸಿತದ ಪರಿಣಾಮ ನಿನ್ನೆ ನಗರದಲ್ಲಿ ಧಾರಾಕಾರ ಮಳೆಯಾಗಿದ್ದು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ನಿನ್ನೆ ಒಂದೇ ದಿನಕ್ಕೆ 60 ಮಿಮೀ ಮಳೆಯಾಗಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇರಳ CM ಆಯ್ಕೆ ಕಗ್ಗಂಟು: ವಿಡಿ ಸತೀಶನ್ ಅಥವಾ ಕೆಸಿ ವೇಣುಗೋಪಾಲ್? ಎಲ್ಲಾ ಸಸ್ಪೆನ್ಸ್ ಗಳಿಗೆ ಇಂದು ಅಂತಿಮ ತೆರೆ!

'ಬಿಜೆಪಿ ವಿತರಿಸುವ ಕೇಸರಿ ಶಾಲು ಎಲ್ಲಾ ಅತ್ಯಾಚಾರ, ಅನಾಚಾರಗಳಿಗೂ ಲೈಸೆನ್ಸ್: ಯುವ ಸಮುದಾಯದ ಭವಿಷ್ಯದ ಮೇಲೆ ಸರ್ಜಿಕಲ್ ಸ್ಟ್ರೈಕ್'

ದ್ವಿರಾಷ್ಟ್ರ ಸಿದ್ದಾಂತದ ಸಾವರ್ಕರ್ ವೀರ: ದೇಶ ಇಬ್ಭಾಗ ಮಾಡಿದ ಜಿನ್ನಾ ಜಾತ್ಯಾತೀತ; ಸಂಘಪರಿವಾರದ ದೇಶದ್ರೋಹದ ವ್ಯಾಖ್ಯಾನ ಬದಲಾಗಿದೆಯೇ?

ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆಗೂ ಮುನ್ನ ರಷ್ಯಾದ ಸೆರ್ಗೆಯ್ ಲಾವ್ರೊವ್ ಜೊತೆ ಜೈಶಂಕರ್ ಮಹತ್ವದ ಸಭೆ!

IPL 2026: 9ನೇ ಶತಕ ಸಿಡಿಸಿದ ಕೊಹ್ಲಿ, KKR ವಿರುದ್ಧ RCB ಗೆ 6 ವಿಕೆಟ್ ರೋಚಕ ಜಯ; ಅಗ್ರಸ್ಥಾನದ ಮುಕುಟ!

SCROLL FOR NEXT