ಗುಜರಾತ್: ವಾರದಲ್ಲಿ ಮೂರನೇ ಪ್ರಕರಣ- ಮೀಸೆ ಬೆಳೆಸಿದ್ದ ದಲಿತ ಯುವಕನ ಮೇಲೆ ದಾಳಿ
ಗಾಂಧಿನಗರ: ಗುಜರಾತ್ ನಲ್ಲಿ ದಲಿತ ಯುವಕರ ಮೇಲೆ ದಾಳಿ ಮುಂದುವರೆದಿದ್ದು, ಮೀಸೆ ಬೆಳೆಸಿದ್ದಕ್ಕಾಗಿ 17 ವರ್ಷದ ದಲಿತ ಯುವಕನ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಗಾಂಧಿ ನಗರದ ಗ್ರಾಮದಲ್ಲಿ ಈ ಹಿಂದೆ ಇಬ್ಬರು ದಲಿತ ಯುವಕರನ್ನು ಇದೇ ಕಾರಣಕ್ಕೆ ಥಳಿಸಲಾಗಿತ್ತು. ಇದಾದ ಬೆನ್ನಲ್ಲೇ ಗಾಂಧಿನಗರದ ಮತ್ತೊಂದು ಗ್ರಾಮದಲ್ಲಿ ದಲಿತ ಯುವಕನನ್ನು ಥಳಿಸಲಾಗಿದ್ದು, ಒಂದೇ ವಾರದ ಅಂತರದಲ್ಲಿ ನಡೆದಿರುವ ಮೂರನೇ ಪ್ರಕರಣ ಇದಾಗಿದೆ.
ತಮ್ಮ ವಿರುದ್ಧ ನಡೆಯುತ್ತಿರುವ ಹಲ್ಲೆಯನ್ನು ಖಂಡಿಸಿ ಸುಮಾರು 300 ದಲಿತರು ವಾಟ್ಸ್ ಆಪ್ ಡಿಪಿಯನ್ನು ಮೀಸೆ ಚಿತ್ರದ ಸಹಿತ ಇರುವ ಮಿ.ದಲಿತ್ ಎಂಬ ಬರಹದೊಂದಿಗೆ ಅಪ್ಡೇಟ್ ಮಾಡಿಕೊಂಡಿದ್ದಾರೆ.
ಪರೀಕ್ಷೆ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ನನ್ನ ಮೇಲೆ ದೌರ್ಜನ್ಯ ನಡೆದಿದೆ ಎಂದು ಹಲ್ಲೆಗೊಳಗಾದ ದಲಿತ ಯುವಕ ಆರೋಪಿಸಿದ್ದಾನೆ. ಸೆ.25 ರಂದು ನಡೆದಿದ್ದ ಹಲ್ಲೆ ಪ್ರಕರಣದಲ್ಲಿ ತನ್ನ ಮೇಲೂ ಹಲ್ಲೆ ನಡೆದಿದೆ ಎಂದು ಯುವಜ ಆರೋಪಿಸಿದ್ದಾನೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos