ಲಖನೌ: ಪ್ರೀತಿಯ ಸಂಕೇತವೆಂದೇ ಹೇಳಲಾಗುವ ವಿಶ್ವವಿಖ್ಯಾತ ತಾಜ್'ಮಹಲ್'ನ್ನು ಧ್ವಂಸಗೊಳಿಸಿದರೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರಕ್ಕೆ ಬೆಂಬಲ ನೀಡುತ್ತೇವೆಂದು ಸಮಾಜವಾದಿ ಪಕ್ಷದ ನಾಯಕ ಅಜಂಖಾನ್ ಅವರು ಬುಧವಾರ ಹೇಳಿದ್ದಾರೆ.
ಪ್ರವಾಸೋದ್ಯಮ ಸಚಿವೆ ರಿತಾ ಬಹುಗುಣ ಅವರು ಇತ್ತೀಚೆಗಷ್ಟೇ ಕೈಪಿಡಿಯೊಂದನ್ನು ಬಿಡುಗಡೆಗೊಳಿಸಿದ್ದರು. ಈ ಕೈಪಿಡಿಯಲ್ಲಿ ಉತ್ತರಪ್ರದೇಶದ ಎಲ್ಲಾ ಪ್ರಮುಖ ಪ್ರವಾಸೋದ್ಯಮ ತಾಣಗಳನ್ನು ಉಲ್ಲೇಖಿಸಲಾಗಿದೆ. ಗೋರಖ್ಪುರದ ದೇವಸ್ತಾನ, ಕೆಲವು ಪಾರಂಪರಿಕ ತಾಣಗಳು, ರಾಮಾಯಣದ ಪೌರಾಣಿಕ ತಾಣಗಳ ಬಗ್ಗೆಯೂ ಕರಪತ್ರದಲ್ಲಿ ಬರೆಯಲಾಗಿದ್ದು, ಪಟ್ಟಿದಲ್ಲಿ ವಿಶ್ವಪ್ರಸಿದ್ಧ ಉತ್ತರಪ್ರದೇಶದ ಆಗ್ರ ಪ್ರವಾಸೀ ತಾಣವಾದ ತಾಜ್ ಮಹಲ್ ಹೆಸರನ್ನೇ ಉಲ್ಲೇಖಿಸದಿರುವುದರಿಂದ ವಿವಾದ ಸೃಷ್ಟಿಯಾಗಿದೆ.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅಜಂ ಖಾನ್ ಅವರು, ವಿಶ್ವದ ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್'ನ್ನು ಧ್ವಂಸಗೊಳಿಸಿದರೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರವನ್ನು ಬೆಬಲಿಸುತ್ತೇನೆಂದು ಹೇಳಿದ್ದಾರೆ, ಅಲ್ಲದೆ, ಕೆಂಪುಕೋಟೆ, ತಾಜ್'ಮಹಲ್, ಕುತುಬ್ ಮಿನಾರ್ ನ್ನು ಗುಲಾಮಗಿರಿಯ ಸಂಕೇತವಾಗಿದೆ ಎಂದಿದ್ದಾರೆ.