ದೇಶ

ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆ ಸುಧಾರಿಸಬೇಕಿದೆ: ರಾಜ್ಯಪಾಲರು

Srinivas Rao BV
ಲಖನೌ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪರಿಸ್ಥಿತಿಯ ಸುಧಾರಣೆ ಅಗತ್ಯವಿದೆ ಎಂದು ಉತ್ತರ ಪ್ರದೇಶದ ರಾಜ್ಯಪಾಲ ರಾಮ್ ನಾಯ್ಕ್ ಹೇಳಿದ್ದಾರೆ. 
ಈ ಹಿಂದೆಯೂ ನಾನು ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಮಾತನಾಡುತ್ತಿದ್ದೆ, ಕಾನೂನು ಸುವ್ಯವಸ್ಥೆ ಸುಧಾರಣೆಯಾಗಬೇಕಿದೆ ಎಂದು ಈಗಲೂ ಹೇಳುತ್ತೇನೆಂದು ರಾಮ್ ನಾಯ್ಕ್ ಹೇಳಿದ್ದಾರೆ. ಮಹಿಳೆಯರಿಗೆ ಸುರಕ್ಷತೆಯ ಜೀವನ ನಡೆಸುವ ಎಲ್ಲಾ ಹಕ್ಕು ಇದೆ, ಸರ್ಕಾರ ಹಾಗೂ ಪೊಲೀಸರು ಮಹಿಳೆಯರಿಗೆ ಸುರಕ್ಷತೆ ನೀಡಬೇಕು ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟಿದ್ದಾರೆ. 
ಇದೇ ವೇಳೆ ಬೆಳೆ ಪರಿಹಾರ ಯೋಜನೆಯಡಿಯಲ್ಲಿ ರೈತರಿಗೆ ಅತ್ಯಲ್ಪ ಪ್ರಮಾಣದ ಹಣವನ್ನು ನೀಡುತ್ತಿರುವುದರ ಬಗ್ಗೆಯೂ ರಾಮ್ ನಾಯ್ಕ್ ಪ್ರತಿಕ್ರಿಯೆ ನೀಡಿದ್ದು, ರೈತರಿಗೆ ಕೇವಲ 2 ಹಾಗೂ 5 ರೂಪಾಯಿ ನೀಡುತ್ತಿರುವುದರ ಬಗ್ಗೆ ಸ್ಪಷ್ಟ ಸಾಕ್ಷ್ಯಾಧಾರಗಳಿದ್ದಲ್ಲಿ ನನ್ನ ಗಮನಕ್ಕೆ ತನ್ನಿ ಎಂದೂ ಮಾಧ್ಯಮಗಳಿಗೆ ರಾಮ್ ನಾಯ್ಕ್ ತಿಳಿಸಿದ್ದಾರೆ. 
SCROLL FOR NEXT