ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನ
ತಿರುವನಂತಪುರಂ: ಇದೇ ಮೊದಲ ಬಾರಿಗೆ ಕೇರಳದ ದೇವಸ್ಥಾನಗಳಲ್ಲಿ ಅರ್ಚಕರಾಗಿ ಆರು ದಲಿತರು ಸೇರಿದಂತೆ 36 ಬ್ರಾಹ್ಮಣೇತರರನ್ನು ನೇಮಕಮಾಡುವಂತೆ ಕೇರಳ ದೇವಸ್ಥಾನ ನೇಮಕಾತಿ ಮಂಡಳಿ ಶಿಫಾರಸು ಮಾಡಿದೆ.
ಟ್ರವಂಕೊರ್ ದೇವಸ್ಥಾನ ಮಂಡಳಿ(ಟಿಡಿಬಿ) ನಿರ್ವಹಣೆ ಮಾಡುತ್ತಿರುವ ದೇವಸ್ಥಾನಗಳಲ್ಲಿ ಇದೇ ಮೊದಲ ಬಾರಿಗೆ ಆರು ದಲಿತರನ್ನು ಅರ್ಚಕರಾಗಿ ನೇಮಕ ಮಾಡುವಂತೆ ಶಿಫಾರಸು ಮಾಡಿರುವುದಾಗಿ ಕೇರಳ ದೇವಸ್ಥಾನ ನೇಮಕಾತಿ ಮಂಡಳಿ ಶುಕ್ರವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಲೋಕ ಸೇವಾ ಆಯೋಗ(ಪಿಎಸ್ ಸಿ) ಅರೆಕಾಲಿಕ ಅರ್ಚಕ ಹುದ್ದೆಗಾಗಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸಿದ್ದು, ಇದರ ಆಧಾರದ ಮೇಲೆ ಅರ್ಚಕರನ್ನು ನೇಮಕ ಮಾಡಿರುವುದಾಗಿ ದೇವಸ್ಥಾನ ನೇಮಕಾತಿ ಮಂಡಳಿ ಹೇಳಿದೆ.
ಮೀಸಲಾತಿ ಮತ್ತು ಮೆರಿಟ್ ಆಧಾರದ ಮೇಲೆ ಅರ್ಚಕರನ್ನು ನೇಮಕ ಮಾಡಲಾಗಿದೆ. ಇದರಲ್ಲಿ ಭ್ರಷ್ಟಾಚಾರಕ್ಕೆ ಯಾವುದೇ ಅವಕಾಶ ನೀಡಿಲ್ಲ ಎಂದು ದೇವಸ್ಥಾನಂ ಸಚಿವ ಕಡಕಂಪಲ್ಯ ರಾಮಚಂದ್ರನ್ ಅವರು ಸ್ಪಷ್ಟಪಡಿಸಿದ್ದಾರೆ.