ನವದೆಹಲಿ: ಮಹಾತ್ಮಾ ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ತನಿಖೆಯನ್ನು ಪುನರ್ ಪ್ರಾರಂಭಿಸುವಂತೆ ಸಲ್ಲಿಸಲಾಗಿದ್ದ ಮನವಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಇಂದು ಕೆಲವು ಮಹತ್ವದ ಪ್ರಶ್ನೆಗಳನ್ನು ಎತ್ತಿದೆ.
ಸಂಕ್ಷಿಪ್ತ ವಿಚಾರಣೆಯ ನಂತರ ನ್ಯಾಯಮೂರ್ತಿ ಎಸ್ ಎಸ್ ಬೊಬ್ಬೆ ಮತ್ತು ಎಲ್ ನಾಗೇಶ್ವರ ರಾವ್ ಒಳಗೊಂಡ ಪೀಠವು ಹಿರಿಯ ವಕೀಲ ಮತ್ತು ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮ್ರೆಂದರ್ ಶರಣ್ ಅವರನ್ನು ನ್ಯಾಯಾಲಯಕ್ಕೆ ಸಹಾಯ ಮಾಡಲು ಅಮಿಕಸ್ ಕ್ಯೂರಿ ಆಗಿ ನೇಮಿಸಿಕೊಂಡಿದೆ.
15 ನಿಮಿಷಗಳ ಕಾಲ ನಡೆದ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯವು ಈ ಹಿಂದೆ ನಡೆಸಿದ್ದ ವಿಚಾರಣೆಯಲ್ಲಿ 'ಯಾವುದೇ ತೀರ್ಮಾನಕ್ಕೆ ಬಂದಿಲ್ಲ' ಎಂಡು ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿ ಶರ್ಮಾ, ಇದರ ಕುರಿತಂತೆ ಸದ್ಯಕ್ಕೆ ಯಾವ ತೀರ್ಮಾನ ಕೈಗೊಳ್ಳ ಬರುವುದಿಲ್ಲ. ಮುಂದಿನ ವಿಚಾರಣೆಯನ್ನು ಅ.30ಕ್ಕೆ ನಡೆಸಲಾಗುತ್ತದೆ ಎಂದರು.
ಸಂಶೋಧನಾ ಮತ್ತು ಅಭಿನವ ಭಾರತ ಟ್ರಸ್ಟಿ ಆಗಿರುವ ಮುಂಬಯಿ ಮೂಲದ ಡಾ. ಪಂಕಜ್ ಫಾಡ್ನಿಸ್ ಸಲ್ಲಿಸಿದ ಅರ್ಜಿ ಇದಾಗಿದ್ದು ಹಲವಾರು ದಾಕಲೆಗಳೊದನೆ ಬಾಪೂ ಹತ್ಯೆಯ ತನಿಖೆಯನ್ನು ಮರುಪರಿಶೀಲಿಸುವಂತೆ ಅರ್ಜಿದಾರರು ಕೋರಿದ್ದಾರೆ. ಭಾರತ ಇತಿಹಾಸದಲ್ಲಿ ಇದು ಅತ್ಯಂತ ದೊಡ್ಡ ತಿರುವು ಆಗಲಿದೆ ಎನ್ನಲಾಗಿದೆ
ಹಿಂದೂ ರಾಷ್ಟ್ರೀಯತೆಯ ಬಲಪಂಥೀಯ ನಾಥೂರಾಮ್ ವಿನಯಕ್ ಗೋಡ್ಸೆ ಇಂದ ಜನವರಿ 30, 1948 ರಂದು ಗಾಂಧಿ ಗುಂಡೇಟಿಗೆ ಬಲಿಯಾಗಿದ್ದರು..