ಪ್ರಧಾನಿ ಮೋದಿ ನನ್ನನ್ನು ಮದುವೆಯಾಗಿ...ದೆಹಲಿಯಲ್ಲಿ ಧರಣಿ ನಡೆಸುತ್ತಿರುವ ಮಹಿಳೆ! 
ದೇಶ

ಪ್ರಧಾನಿ ಮೋದಿ ನನ್ನನ್ನು ಮದುವೆಯಾಗಿ... ದೆಹಲಿಯಲ್ಲಿ ಮಹಿಳೆ ಧರಣಿ!

ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ವಿವಾಹವಾಗಬೇಕೆಂದು ಹಠಕ್ಕೆ ಬಿದ್ದಿರುವ ಮಹಿಳೆಯೊಬ್ಬರು ರಾಜಧಾನಿ ದೆಹಲಿಯ ಜಂತರ್ ಮಂತರ್'ನಲ್ಲಿ ಕಳೆದೊಂದು ತಿಂಗಳಿನಿಂದ ಧರಣಿಗೆ ಕುಳಿತಿರುವ...

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ವಿವಾಹವಾಗಬೇಕೆಂದು ಹಠಕ್ಕೆ ಬಿದ್ದಿರುವ ಮಹಿಳೆಯೊಬ್ಬರು ರಾಜಧಾನಿ ದೆಹಲಿಯ ಜಂತರ್ ಮಂತರ್'ನಲ್ಲಿ ಕಳೆದೊಂದು ತಿಂಗಳಿನಿಂದ ಧರಣಿಗೆ ಕುಳಿತಿರುವ ವಿಲಕ್ಷಣ ಘಟನೆಯೊಂದು ನಡೆದಿದೆ. 
ಜೈಪುರ 40 ವರ್ಷದ ಓಂ ಶಾಂತಿ ಶರ್ಮಾ ಎಂಬ ಮಹಿಳೆ ಪ್ರಧಾನಿ ಮೋದಿಯವರನ್ನು ವಿವಾಹವಾಗಬೇಕೆಂದು ಒತ್ತಾಯಿಸಿ ಧರಣಿ ಕುಳಿತಿದ್ದಾರೆ. 
ಧರಣಿ ನಡೆಸುತ್ತಿರುವ ಓಂ ಶಾಂತಿ ಶರ್ಮಾ ವಿವಾಹಿತೆಯಾಗಿದ್ದು, 20 ವರ್ಷದ ಮಗಳಿದ್ದಾಳೆ. ಮೋದಿಯವರು ತಮ್ಮನ್ನು ಮದುವೆಯಾಗಬೇಕೆಂದು ಒತ್ತಾಯಿಸಿ ಶಾಂತಿಯವರು ಸೆ.8 ರಿಂದ ಜಂತರ್ ಮಂತರ್ ನಲ್ಲಿ ಧರಣಿ ಕುಳಿತಿದ್ದಾರೆಂದು ವರದಿಗಳು ತಿಳಿಸಿವೆ. 
ನನಗೆ ಈಗಾಗಲೇ ವಿವಾಹವಾಗಿದೆ. ಆದರೆ, ದಾಂಪತ್ಯ ಜೀವನ ಸರಿಯಾಗಿರಲಿಲ್ಲ. ನಾನು ಅನೇಕ ವರ್ಷಗಳಿಂದ ಪತಿಯಿಂದ ದೂರವಿದ್ದು, ಒಂಟಿಯಾಗಿ ಜೀವನ ನಡೆಸುತ್ತಿದ್ದೇನೆ. ಈ ಹಿಂದೆ ನನಗೆ ಹಲವು ಮದುವೆ ಪ್ರಸ್ತಾಪಗಳು ಬಂದಿದ್ದವು. ಅವುಗಳನ್ನು ನಾನು ತಿರಸ್ಕರಿಸಿದ್ದೆ. ಇದೀಗ ಮದುವೆಯಾಗುವ ಮನಸ್ಸಾಗಿದ್ದು. ನಾನು ಪ್ರಧಾನಿ ಮೋದಿಯವರನ್ನು ವಿವಾಹವಾಗಲು ಬಯಸಿ ಧರಣಿ ಕುಳಿತಿದ್ದೇನೆಂದು ಓಂ ಶಾಂತಿಯವರು ಹೇಳಿಕೊಂಡಿದ್ದಾರೆ. 
ಇದೇ ವೇಳೆ ಮೋದಿಯವರನ್ನು ಯಾವ ಕಾರಣಕ್ಕೆ ಮದುವೆಯಾಗಲು ಬಯಸಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಮೋದಿಯವರನ್ನು ಭೇಟಿ ಮಾಡಲು ನನಗೆ ಅವಕಾಶ ಸಿಗುವುದಿಲ್ಲ ಎಂದು ನನಗೆ ಗೊತ್ತು. ಆದರೆ, ಮೋದಿಯವರಿಗೆ ಒಬ್ಬರ ಸಹಾಯಬೇಕಿದೆ ಎಂಬುದು ನನಗೆ ಗೊತ್ತು. ಏಕೆಂದರೆ, ಅವರೂ ಕೂಡ ನನ್ನಂತೆಯೇ ಒಂಟಿಯಾಗಿದ್ದಾರೆ. 
ಮೋದಿಯವರನ್ನು ವಿವಾಹವಾಗುವ ಸಲುವಾಗಿ ನಾನು ಧರಣಿ ಕುಳಿತಿರುವುದನ್ನು ಕೇಳಿದರೆ ಜನರು ನಗುತ್ತಾರೆ ಎಂಬುದೂ ನನಗೆ ಗೊತ್ತಿದೆ. ಹಿರಿಯರಿಗೆ ಸಹಾಯ ಮಾಡುವುದು ನಮ್ಮ ಸಂಸ್ಕೃತಿ. ಚಿಕ್ಕಂದಿನಿಂದಲೂ ನಾನು ಹಿರಿಯರಿಗೆ ಗೌರವ ನೀಡಿಕೊಂಡು ಬಂದವಳು. ನಾನು ಮೋದಿಯವರ ಕೆಲಸದಲ್ಲಿ ನೆರವಾಗಬೇಕೆಂದು ಬಯಸಿದ್ದೇನೆ. ಹೀಗಾಗಿ ಮದುವೆ ಮಾಡಿಕೊಳ್ಳಿ ಎಂದು ಬೇಡಿಕೊಳ್ಳುತ್ತಿದ್ದೇನೆ.
ನನಗೆ ನನ್ನ ಮಗಳ ಬಗ್ಗೆ ಚಿಂತೆಯಿಲ್ಲ. ಏಕೆಂದರೆ, ಈಗಾಗಲೇ ಸಾಕಷ್ಟು ಹಣ ಮತ್ತು ಜಮೀನು ಇದೆ. ಇದರಲ್ಲಿ ಕೆಲ ಜಮೀನನ್ನು ಮಾರಾಟ ಮಾಡಿ ಮೋದಿಯವರಿಗೆ ಉಡುಗೊರೆ ಕೊಂಡುಕೊಳ್ಳಲು ಬಯಸಿದ್ದೇನೆ ಎಂದಿದ್ದಾರೆ. 
ಇದೇ ವೇಳೆ ಸ್ಥಳವನ್ನು ತೊರೆಯುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಆದೇಶ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಜಾಗ ತೊರೆಯುವಂತೆ ಸರ್ಕಾರ ಮಾಡಿದರೆ ಮುಂದೆ ಏನು ಮಾಡಬೇಕೆಂಬುದು ನನಗೆ ಗೊತ್ತಿಲ್ಲ. ಕಳೆದ ಒಂದು ತಿಂಗಳಿನಿಂದ ನಾನು ಇಲ್ಲಿ ಪ್ರತಿಭಟನೆ ನಡೆಸುತ್ತಿದ್ದೇನೆ. ಇಲ್ಲಿ ನನಗೆ ಯಾವುದೇ ಸಮಸ್ಯೆಗಳಾಗಿಲ್ಲ. ಗುರುದ್ವಾರಗಳಲ್ಲಿ ಊಟ ಸೇವಿಸಿ, ಸಾರ್ವಜನಿಕ ಶೌಚಾಲಯಗಳನ್ನು ಬಳಸಿಕೊಂಡು ದಿನ ಕಳೆಯುತ್ತಿದ್ದೇನೆ. ಮೋದಿಯವರು ಬಂದು ನನ್ನನ್ನು ಭೇಟಿಯಾಗುವವರೆಗೂ ನನ್ನ ಧರಣಿಯನ್ನು ಹೀಗೆಯೇ ಮುಂದುವರಿಸುತ್ತೇನೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!