ದೇಶ

ಔಷಧಿಗಳಿಗೆ ಚೀನಾ ಅವಲಂಬನೆ ಕಡಿಮೆ ಮಾಡಲಿರುವ ಭಾರತ

Srinivas Rao BV
ನವದೆಹಲಿ: ಭಾರತ-ಚೀನಾ ನಡುವಿನ ಶೀತಲ ಸಮರದಿಂದಾಗಿ ಭಾರತ ಚೀನಾ ವಸ್ತುಗಳ ಮೇಲೆ ಅವಲಂಬನೆ ಕಡಿಮೆ ಮಾಡಲು ಯತ್ನಿಸುತ್ತಿದೆ. ಇದರ ಭಾಗವಾಗಿ ಭಾರತ ಸರ್ಕಾರ ಸಹ ಕ್ರಮ ಕೈಗೊಂಡಿದ್ದು, ಔಷಧೀಯ ಉತ್ಪನ್ನಗಳಿಗಾಗಿ ಚೀನಾ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ನಿರ್ಧರಿಸಿದೆ. 
ಔಷಧೀಯ ಉತ್ಪನ್ನಗಳ ನಿಯಂತ್ರಕರು ಹಾಗೂ ಆರೋಗ್ಯ ಇಲಾಖೆ ಚೀನಾ ಔಷಧೀಯ ಉತ್ಪನ್ನಗಳನ್ನು ಕಡಿಮೆ ಮಾಡಲು ಹಾಗೂ ಅತ್ಯುತ್ತಮ ಗುಣಮಟ್ಟದ ಔಷಧಗಳು ಮಾತ್ರ ಪೂರೈಕೆಯಾಗುವುದರ ನಿಟ್ಟಿನಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಯೋಜನೆ ರೂಪಿಸುತ್ತಿವೆ. 
ಭಾರತ ಶೇ.70-80 ರಷ್ಟು ಔಷಧೀಯ ಉತ್ಪನ್ನಗಳ ಕಚ್ಚಾ ವಸ್ತುಗಳೂ ಸೇರಿದಂತೆ, ವೈದ್ಯಕೀಯ ಉಪಕರಣಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದೆ. ಒಂದು ವೇಳೆ ಭಾರತ-ಚೀನಾದ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟರೆ ಶೇ.70-80 ರಷ್ಟು ಔಷಧೀಯ ಉತ್ಪನ್ನಗಳ ಅವಲಂಬನೆಗೆ ಹೊಡೆತ ಬೀಳಲಿದೆ. ಈ ಬಗ್ಗೆ 2014 ರಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಎಚ್ಚರಿಕೆ ನೀಡಿದ್ದರು. ಈಗ ಭಾರತ ಸರ್ಕಾರ ಔಷಧಿಗಳಿಗೆ ಚೀನಾ ಅವಲಂಬನೆ ಕಡಿಮೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. 
SCROLL FOR NEXT