ಮುಂಬೈ: ಬಿಗ್ ಬಾಸ್ 11 ಶೋದಿಂದ ಎವಿಕ್ಟ್ ಆಗಿದ್ದ ಸ್ಪರ್ಧಿ ಜುಬೈರ್ ಖಾನ್, ಬಿಗ್ ಬಾಸ್ ಶೋ ನಡೆಸಿಕೊಡುತ್ತಿದ್ದ ಸಲ್ಮಾನ್ ಖಾನ್ ವಿರುದ್ಧ ದೂರು ದಾಖಲಿಸಿದ್ದಾರೆ.
ಮುಂಬೈ ಪೊಲೀಸ್ ಠಾಣೆಯಲ್ಲಿ ಜುಬೈರ್ ಖಾನ್ ದೂರು ದಾಖಲಿಸಲು ಮುಂದಾಗಿದ್ದಾರೆ. ಆದರೆ ದೂರು ದಾಖಲಿಸಿಕೊಳ್ಳಲು ನಿರಾಕರಿಸಿರುವ ಮುಂಬೈ ಪೊಲೀಸರು ಲೋನಾವಾಲಾದ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಜುಬೈರ್ ಖಾನ್ ಗೆ ತಿಳಿಸಿದ್ದಾರೆ.
ಬಿಗ್ ಬಾಸ್ ನ ಶನಿವಾರದ ಎಲಿಮಿನೇಷನ್ ಶೋದಲ್ಲಿ ಸಲ್ಮಾನ್ ಖಾನ್ ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಜುಬೈರ್ ಖಾನ್ ಆರೋಪಿಸಿದ್ದಾರೆ. ಬಿಗ್ ಬಾಸ್ ನ ಸಹ ಸ್ಪರ್ಧಿಗಳೊಂದಿಗೆ ಅನುಚಿತ ವರ್ತನೆ ತೋರಿದ್ದಕ್ಕಾಗಿ ಜುಬೈರ್ ಖಾನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು..
ಜುಬೈರ್ ಮುಂಬೈ ಠಾಣೆಯ ಆಂಟೊಪ್ ಹಿಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.