ಸ್ವಯಂಘೋಷಿತ ದೇವ ಮಹಿಳೆ ರಾಧೆ ಮಾ
ನವದೆಹಲಿ: ಪೂರ್ವ ದೆಹಲಿಯ ವಿವೇಕ ಪೊಲೀಸ್ ಠಾಣೆಯಲ್ಲಿ ಅಧಿಕಾರಿಯ ಖುರ್ಚಿಯಲ್ಲಿ ಕುಳಿತುಕೊಂಡಿದ್ದಕ್ಕಾಗಿ ಮತ್ತು ಪೊಲೀಸ್ ಸಮುದಾಯವನ್ನು ಅವಮಾನಿಸಿದ್ದಕ್ಕಾಗಿ ದೆಹಲಿ ವಕೀಲ ಗೌರವ ಗುಲಾಟಿ ಎಂಬುವವರು ಸ್ವಯಂಘೋಷಿತ ದೇವ ಮಹಿಳೆ ರಾಧೆ ಮಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆಂದು ಸೋಮವಾರ ತಿಳಿದುಬಂದಿದೆ.
ಕ್ರಿಮಿನಲ್, ಪಿತೂರಿ ಹಾಗೂ ಮಾನನಷ್ಟಕ್ಕೆ ರಾಧೆ ಮಾ ಹೊಣೆಗಾರರಾಗಿದ್ದಾರೆ. ಮತ್ತು ದೆಹಲಿ ಪೊಲೀಸರ ವರ್ಚಸ್ಸನ್ನು ಹಾಳು ಮಾಡಿದ್ದಕೂ ಹೊಣೆಗಾರರಾಗಿದ್ದಾರೆ. ರಾಧೆ ಮಾ ಅವರ ನಡವಳಿಕೆಯಿಂದಾಗಿ ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಅವರಿಗೆ ಗೌರವವಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಗುಲಾಟಿಯವರು ಹೇಳಿಕೊಂಡಿದ್ದಾರೆ.
ಠಾಣಾಧಿಕಾರಿ ಸಂಜಯ ಶರ್ಮಾ ವೃತ್ತಿಪರವಲ್ಲದ ವರ್ತನೆಯ ಕುರಿತು ವಿಚಾರಣೆಗಾಗಿ ಅ.5 ರಂದು ಆದೇಶಿಸಲಾಗಿತ್ತು. ಮತ್ತು ವಿಚಾರಣೆ ಪೂರ್ಣಗೊಳ್ಳುವವರೆಗೆ ಜಿಲ್ಲಾ ಪೊಲೀಸ್ ಲೈನ್ಸ್ ನಲ್ಲಿ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿತ್ತು.
ಸೆ.28ರಂದು ತೆಗೆದಿದ್ದೆನ್ನಲಾದ ಫೋಟೋವೊಂದು ಸುದ್ದಿಗೆ ಗ್ರಾಸವಾಗಿತ್ತು. ಫೋಟೋದಲ್ಲಿ ರಾಧೆ ಮಾ ಶರ್ಮಾ ಅವರ ಖರ್ಚಿಯಲ್ಲಿ ಕುಳಿತಿಕೊಂಡಿರುವುದು ಮತ್ತು ಶರ್ಮಾ ಎರಡೂ ಕೈಗಳನ್ನು ಜೋಡಿಸಿ ಆಕೆಯ ಪಕ್ಕ ವಿನೀತರಾಗಿ ನಿಂತಿಕೊಂಡಿರುವುದು ಕಂಡು ಬಂದಿತ್ತು.
ಘಟನೆ ಬಳಿಕ ಶರ್ಮಾ ಅವರನ್ನು ಅಮಾನತುಗೊಳಿಸಲಾಗಿದೆ. ಆದರೆ, ರಾಧೆ ಮಾ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಗುಲಾಟಿಯವರು ದೂರಿನಲ್ಲಿ ಹೇಳಿಕೊಂಡಿದ್ದಾರೆ.