ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ 
ದೇಶ

ದೆಹಲಿ ಮೆಟ್ರೋ ದರ ಏರಿಕೆಯಿಂದ ಓಲಾ, ಉಬರ್'ಗಳಿಗೆ ಲಾಭ: ಮನೀಷ್ ಸಿಸೋಡಿಯಾ

ದೆಹಲಿ ಮೆಟ್ರೋ ಪ್ರಯಾಣ ದರ ಏರಿಕೆಯಿಂದ ಓಲಾ, ಉಬರ್ ನಂತರ ಖಾಸಗಿ ಕ್ಯಾಬ್ ನಿರ್ವಾಹಕರಿಗೆ ಲಾಭವಾಗಲಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ಮಂಗಳವಾರ ಹೇಳಿದ್ದಾರೆ...

ನವದೆಹಲಿ: ದೆಹಲಿ ಮೆಟ್ರೋ ಪ್ರಯಾಣ ದರ ಏರಿಕೆಯಿಂದ ಓಲಾ, ಉಬರ್ ನಂತರ  ಖಾಸಗಿ ಕ್ಯಾಬ್ ನಿರ್ವಾಹಕರಿಗೆ ಲಾಭವಾಗಲಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ಮಂಗಳವಾರ ಹೇಳಿದ್ದಾರೆ. 
ಮೆಟ್ರೋ ಪ್ರಯಾಣ ದರ ಏರಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮನೀಷ್ ಸಿಸೋಡಿಯಾ ಅವರು, ಮೆಟ್ರೋ ರೈಲನ್ನು ಸಾರ್ವಜನಿಕ ಸಾರಿಗೆ ಮಾಡಲು ಯತ್ನಗಳನ್ನು ಮಾಡಲಾಗುತ್ತಿದೆ. ಆದರೆ, ಈ ಪ್ರಯತ್ನ ಯಶಸ್ವಿಯಾಗಲು ಯಾವುದೇ ಕಾರಣಕ್ಕೂ ಆಪ್ ಸರ್ಕಾರ ಬಿಡುವುದಿಲ್ಲ ಎಂದು ಹೇಳಿದ್ದಾರೆ. 
ಮೆಟ್ರೋ ರೈಲನ್ನು ಸಾರ್ವಜನಿಕರ ಹಣದಿಂದ ನಡೆಸಲಾಗುತ್ತಿದೆ. ಮೆಟ್ರೋ ರೈಲು ಟಿಕೆಟ್ ದರ ಏರಿಕೆಯಿಂದಾಗಿ ಓಲಾ, ಉಬರ್ ನಂತರ ಖಾಸಗಿ ಕ್ಯಾಬ್ ನಿರ್ವಾಹಕರಿಗೆ ಲಾಭವಾಗಲಿದೆ. ಖಾಸಗಿ ಕ್ಯಾಬ್ ನಿರ್ವಾಹಕರಿಗೆ ಲಾಭ ಮಾಡುವ ಉದ್ದೇಶದಿಂದಲೇ ಮೆಟ್ರೋ ದರವನ್ನು ಏರಿಕೆ ಮಾಡಲಾಗಿದೆ. ಮೆಟ್ರೋ ಪ್ರಯಾಣ ದರ ಖಾಸಗಿ ಕಂಪನಿಗಳ ಟ್ಯಾಕ್ಸಿಗಳಿಗಿಂತಲೂ ಹೆಚ್ಚಳಗೊಂಡಿದೆ. ಮೆಟ್ರೋ ಪ್ರಯಾಣ ದರ ಹೆಚ್ಚಳಗೊಂಡರೆ, ಸಾಮಾನ್ಯವಾಗಿಯೇ ಜನರು ಕ್ಯಾಬ್ ಗಳ ಮೊರೆ ಹೋಗುತ್ತಾರೆ. ಇದರಿಂದ ದೆಹಲಿಯಲ್ಲಿ ಮಾಲಿನ್ಯ ಕೂಡ ಹೆಚ್ಚಳವಾಗುತ್ತದೆ. 
ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದೇ ಆಗಿದ್ದರೆ, ಪ್ರಯಾಣ ದರವನ್ನು ಏರಿಕೆ ಮಾಡುವ ಅಗತ್ಯವೇ ಇರುತ್ತಿರಲಿಲ್ಲ. ಮೆಟ್ರೋ ರೈಲು ಪ್ರಯಾಣ ದರ ಏರಿಕೆಯಾದ ಬಳಿಕ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗತೊಡಗಿವೆ ಎಂದು ತಿಳಿಸಿದ್ದಾರೆ. 
ದೆಹಲಿ ಮೆಟ್ರೋ ಪ್ರಯಾಣಿಕರಿಗೆ ಸರ್ಕಾರ ದೊಡ್ಡ ಶಾಕ್ ವೊಂದನ್ನು ನೀಡಿದೆ. 2009ರ ಬಳಿಕ ದರ ಏರಿಕೆ ಮಾಡದಿದ್ದ ದೆಹಲಿ ಮೆಟ್ರೋ ನಿಗಮ ಕಳೆದ 5 ತಿಂಗಳಲ್ಲಿ ಎರಡನೇ ಬಾರಿ ದರ ಏರಿಕೆ ಮಾಡಿದೆ. 5 ಕಿ.ಮೀ.ಗಿಂತ ಹೆಚ್ಚು ದೂರ ಪ್ರಯಾಣಿಸುವ ಗ್ರಾಹಕರ ಟಿಕೆಟ್ ಮೇಲೆ 10 ರುಪಾಯಿ ಹಾಗೂ 2.5 ಕಿ.ಮೀ.ದೂರಕ್ಕೆ 5 ರುಪಾಯಿ ಹೆಚ್ಚಳ ಮಾಡಲಾಡಿದೆ. ನೂತನ ದರ ಇಂದಿನಿಂದಲೇ ಜಾರಿಗೆ ಬಂದಿದ್ದು, ಸರ್ಕಾರದ ಈ ನಿರ್ಧಾರ ಜನತೆಗೆ ಅಘಾತಕ್ಕೊಳಗಾಗುವಂತೆ ಮಾಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

SC/ST ಮೀಸಲಾತಿ ಹೆಚ್ಚಳ ರದ್ದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬಿಗ್ ಶಾಕ್, ಭಾರೀ ಹಿನ್ನಡೆ..!

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!

ಸ್ಥಳೀಯ ಸಂಸ್ಥೆ ಚುನಾವಣೆ: ಕಾಂಗ್ರೆಸ್ ಭದ್ರಕೋಟೆ ಮುರಿಯಲು BJP-JDS ರಣತಂತ್ರ; HDK ನೇತೃತ್ವದಲ್ಲಿ ಮಹತ್ವದ ಸಭೆ..!

ಮಲೆನಾಡು, ಕರಾವಳಿ ರೈಲ್ವೆ ಯೋಜನೆಗಳಿಗೆ ಕೇಂದ್ರ ಸರ್ಕಾರ ಆದ್ಯತೆ: ಕೇಂದ್ರ ಸಚಿವ ವಿ. ಸೋಮಣ್ಣ