ನವದೆಹಲಿ: ಕಳೆದ ವರ್ಷ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾದ ಭಾರತೀಯ ನೌಕಾಪಡೆ ನಾವಿಕನನ್ನು ಆತನ ಹುದ್ದೆಯಿಂದ ವಜಾ ಮಾಡಲಾಗಿದೆ.
ಮನಿಶ್ ಗಿರಿ, ನೌಕಾ ನಾವಿಕ, ಕಳೆದ ಆಗಸ್ಟ್ ನಲ್ಲಿ ತಾನು ರಜೆಯಲ್ಲಿದ್ದಾಗ ಮುಂಬೈ ನ ಆಸ್ಪತ್ರೆಯಲ್ಲಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಏಳು ವರ್ಷಗಳ ಹಿಂದೆ 'ಭಾರತೀಯ ಪುರುಷ ನಾಗರಿಕ' ಎಂಬ ಅರ್ಹತೆ ಮೇಲೆ ನೌಕಾ ಪಡೆಗೆ ಗಿರಿ ಆಯ್ಕೆಯಾಗಿದ್ದು, ಇದೀಗ ಲಿಂಗ ಪರಿವರ್ತನೆ ಮಾಡಿಕೊಳ್ಳುವುಉದುಅರಿಂದ ರಕ್ಷಣಾ ಇಲಾಖೆಯ ನೀತಿ ನಿಯಮಗಳನ್ನು ಉಲ್ಲಂಘನೆ ಆಗಲಿದೆ ಎಂದು ನೌಕಾದಳ ಪ್ರಕಟಣೆಯಲ್ಲಿ ಹೇಳಿದೆ.
ಗಿರಿ ಭಾರತೀಯ ನೌಕಾದಳದ ವಿಶಾಖಪಟ್ಟಣದ ನೌಕಾ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು