ಬೈಕ್ ಸವಾರನೊಬ್ಬ ಸ್ವಪರಿವಾರ ಕುಟುಂಬ ಸಮೇತರಾಗಿ ಬೈಕ್ ನಲ್ಲಿ ಸವಾರಿ ಹೋಗುತ್ತಿದ್ದುದ್ದನ್ನು ಕಂಡ ಸರ್ಕಲ್ ಇನ್ಸ್ ಪೆಕ್ಟರ್ ಅವರು ನಮಸ್ಕರಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಂಧ್ರಪ್ರದೇಶದ ಆನಂತಪುರ ಜಿಲ್ಲೆಯ ಮಡಕಶಿರ ಸರ್ಕಲ್ ನಲ್ಲಿ ಬೈಕ್ ಸವಾರನೊಬ್ಬ ಹೆಲ್ಮೆಟ್ ಆಗದೆ ನಾಲ್ವರೊಂದಿಗೆ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದುದ್ದನ್ನು ತಡೆದ ಪೊಲೀಸ್ ಬಿ ಶುಭಾ ಕುಮಾರ್ ಅವರು ನಿನ್ನ ಕಾರ್ಯಕ್ಕೆ ನನ್ನ ದೊಡ್ಡ ನಮಸ್ಕಾರ ಎಂದು ಹೇಳಿದ್ದು ಈ ಫೋಟೋ ಇದೀಗ ವೈರಲ್ ಆಗಿದೆ.
ಸಂಚಾರಿ ನಿಮಯ ಉಲ್ಲಂಘಿಸಿದ್ದ ಬೈಕ್ ಸವಾರ ತನ್ನ ಇಬ್ಬರು ಮಕ್ಕಳನ್ನು ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿದ್ದ ಹಾಗೂ ತನ್ನ ಹೆಂಡಿಯನ್ನು ಬೈಕ್ ಹಿಂಬದಿ ಕೂರಿಸಿದ್ದು ಇವರಿಬ್ಬರ ಮಧ್ಯೆ ಬಾಲಕಿಯೊಬ್ಬಳನ್ನು ಕೂರಿಸಿದ್ದು ಒಟ್ಟಾರೆ ಒಂದು ಬೈಕ್ ನಲ್ಲಿ ಐವರು ಪ್ರಯಾಣಿಸುತ್ತಿದ್ದರು. ಆಗ ಬೈಕ್ ತಡೆದ ಶುಭಾ ಕುಮಾರ್ ಅವರು ಸುರಕ್ಷತೆ ಬಗ್ಗೆ ಯಾವುದೇ ಪರಿವೇ ಇಲ್ಲದೆ ಈ ರೀತಿ ಪ್ರಯಾಣ ಮಾಡುತ್ತಿರುವುದು ಅಪಾಯದ ಸಂಕೇತ ಇನ್ನು ಮುಂದಾದರೂ ಸಂಚಾರಿ ನಿಮಯ ಪಾಲಿಸಿವಂತೆ ಬುದ್ದಿ ಮಾತು ಹೇಳಿದರು.
ವಿಪರ್ಯಾಸ ಎಂದರೇ ಬೈಕ್ ಸವಾರ ಅದಾಗಲೇ ಒಂದೂವರೆ ಗಂಟೆ ಸಂಚಾರಿ ಸುರಕ್ಷತೆ ಬಗ್ಗೆ ಸೆಮಿನಾರ್ ನಲ್ಲಿ ಭಾಗವಹಿಸಿ ನಂತರ ಐವರನ್ನು ಬೈಕ್ ನಲ್ಲಿ ಕೂರಿಸಿಕೊಂಡು ಹೋಗಿದ್ದಾನೆ. ಪದೇ ಪದೇ ಸಂಚಾರಿ ನಿಯಮ ಉಲ್ಲಂಘನೆ ಮಾಡುತ್ತಿದ್ದ ಬೈಕ್ ಸವಾರನಿಗೆ ಇದಕ್ಕೂ ಮೊದಲೇ ಪೊಲೀಸರು ಎಚ್ಚರಿಕೆ ನೀಡಿದ್ದರು. ಆದರು ಬೈಕ್ ಸವಾರ ಮಾತ್ರ ಎಚ್ಚೆತ್ತುಕೊಂಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics