ದೇಶ

ದೆಹಲಿಯಿಂದ ಕೇವಲ 750 ಕಿ.ಮೀ ದೂರದಲ್ಲಿ ಪಾಕ್ ನಿಂದ ವಿನಾಶಕಾರಿ ಅಣ್ವಸ್ತ್ರ ಸುರಂಗ ಗೋದಾಮು!

Manjula VN

ನವದೆಹಲಿ: ಮನುಕುಲಕ್ಕೆ ವಿನಾಶಕಾರಿಯಾಗಿರುವ 140 ಅಣ್ವಸ್ತ್ರಗಳನ್ನು ಹೊಂದಿರುವ ಪಾಕಿಸ್ತಾನ ಅವುಗಳನ್ನು ಸುರಕ್ಷಿತವಾಗಿಡುವ ಸಲುವಾಗಿ ರಾಜಧಾನಿ ದೆಹಲಿಯಿಂ ಕೇವಲ 750 ಕಿ.ಮೀ ದೂರದಲ್ಲಿ ಭೂಗತ ಸುರಂಗಗಳನ್ನು ನಿರ್ಮಿಸುತ್ತಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 


ಅಮೃತಸರದಿಂದ 350 ಕಿ.ಮೀ ದೂರದಲ್ಲಿನ ಮಿಯನ್'ವಾಲಿ ಎಂಬಲ್ಲಿ 3 ಭೂಗತ ಸುರಂಗಗಳನ್ನು ಪಾಕಿಸ್ತಾನ ನಿರ್ಮಿಸುತ್ತಿದೆ ಎಂದು ಹೇಳಲಾಗುತ್ತಿದೆ. 

10 ಮೀಟರ್ ಎತ್ತರ ಮತ್ತು 10 ಮೀಟರ್ ಅಗಲದ ಒಟ್ಟು 3 ಭೂಗತ ಸುರಂಗಗಳನ್ನು ಪರಸ್ಪರ ಸಂಪರ್ಕಿಸುವ ವ್ಯವಸ್ಥೆಯನ್ನೂ ಹೊಂದಿವೆ. ಪ್ರಸ್ತುತ ನಿರ್ಮಾಣ ಮಾಡಲಾಗುತ್ತಿರುವ ಈ ಸುರಂಗಗಳನ್ನು ತಲುವುದಕ್ಕೆ ಅಗವಾದ ರಸ್ತೆಗಳನ್ನೂ ನಿರ್ಮಿಸುತ್ತಿರುವ ಪಾಕಿಸ್ತಾನ, ಅಣ್ವಸ್ತ್ರಗಳನ್ನು ಸುರಂಗಗಳಿಂದ ಹೊರ ತಂದು ಅವುಗಳನ್ನು ಬೇಕಾದ ಸ್ಥಳಕ್ಕೆ ಸಾಗಿಸುವುದಕ್ಕೆ ಈ ರಸ್ತೆಗಳು ನಿರ್ಣಾಯಕ ಪಾತ್ರವಹಿಸಲಿದೆ ಎಂದು ತಿಳಿದುಬಂದಿದೆ. 

3 ಸುರಂಗಗಳು ಪ್ರತ್ಯೇಕ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಹೊಂದಿದ್ದು, ಸುರಂಗಗಳಲ್ಲಿ ಕನಿಷ್ಟ 12 ರಿಂದ 24 ಅಣ್ವಸ್ತ್ರಗಳನ್ನು ಗೋದಾಮಿನಲ್ಲಿ ಇಡಬಹುದಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಅಣ್ವಸ್ತ್ರಗಳನ್ನು ಸಂಗ್ರಹಿಸಿಡುವ ಹಿನ್ನಲೆಯಲ್ಲಿ ಸುರಂಗಗಳು ಇರುವ ಪ್ರದೇಶಕ್ಕೆ ಮುಳ್ಳುತಂತಿ ಬೇಲಿಗಳನ್ನು ಹಾಕಲಾಗಿದೆ. ಅಲ್ಲದೆ, ಆ ಮೂಲಕ ಯಾರು ಭೂಗತ ಸುರಂಗ ಪ್ರದೇಶವನ್ನು ಪ್ರವೇಶಿಸದಂತೆ, ಸುರಂಗಕ್ಕೆ ಯಾವುದೇ ಹಾನಿ ಎದುರಾಗದಂತೆ ಪಾಕಿಸ್ತಾನ ತೀವ್ರ ಎಚ್ಚರಿಕೆಗಳನ್ನು ವಹಿಸಿದೆ ಎನ್ನಲಾಗುತ್ತಿದೆ. 
SCROLL FOR NEXT