ದೇಶ

ಪ್ರಧಾನಿ ಮೋದಿ ಮನ್ ಕೀ ಬಾತ್ ಎಫೆಕ್ಟ್: ರೂ.50 ಲಕ್ಷ ಗೆದ್ದ ಮಹಿಳೆ!

Manjula VN
ಮುಂಬೈ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನ್ ಕೀ ಬಾತ್, ಮುಂಬೈನ ಮಹಿಳೆಯೊಬ್ಬರಿಗ ಜನಪ್ರಿಯ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ರೂ.50 ಲಕ್ಷ ಬಹುಮಾನ ಗೆಲ್ಲಲು ನೆರವಾಗಿದೆ. 
ಇತ್ತೀಚೆಗೆ ನಡೆದ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಮುಂಬೈನ ಮೀನಾಕ್ಷಿ ಜೈನ್ ಎಂಬ ಮಹಿಳೆ ಭಾಗವಹಿಸಿದ್ದರು. ಕಾರ್ಯಕ್ರಮದ ನಿರ್ವಾಹಕ ನಟ ಅಮಿತಾಭ್ ಬಚ್ಚನ್ ಅವರು, ಕ್ಟಿಟ್ ಇಂಡಿಯಾ ಘೋಷಣೆಯನ್ನು ಯಾರು ಸೃಷ್ಟಿಸಿದ್ದರು? ಎಂಬ ಪ್ರಶ್ನೆಯನ್ನು ಕೇಳಿದರು. 
ಇದಕ್ಕೆ ಮೀನಾಕ್ಷಿಯವರು ಯೂಸಫ್ ಮೆಹ್ರಾಲಿ ಎಂದು ಉತ್ತರಿಸಿದ್ದರು. ಬಳಿಕ ಅಮಿತಾಭ್ ಬಚ್ಚನ್ ಅವರು ಖಚಿತವಾಗಿ ಹೇಗೆ ಹೇಳುವಿರಿ ಎಂದು ಪ್ರಶ್ನಿಸಿದಾಗ, ಪ್ರಧಾನಿ ಮೋದಿಯವರು ತಮ್ಮ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಹೇಳಿದ್ದಾರೆಂದು ಮೀನಾಕ್ಷಿಯವರು ತಿಳಿಸಿದ್ದಾರೆ. 
SCROLL FOR NEXT