ಛೋಟಾ ಉದೇಪುರ್: ಗುಜರಾತ್ ಪ್ರವಾಸದಲ್ಲಿರುವ ಎಐಸಿಸಿ ಉಪಾಧ್ಯಕ್ಷ ಮತ್ತೊಂದು ಯಡವಟ್ಟು ಮಾಡಿಕೊಂದಿದ್ದು, ಗುಜರಾತಿ ಭಾಷೆಯಲ್ಲಿದ್ದ ಸೂಚನಾ ಫಲಕವನ್ನು ಓದಲು ಸಾಧ್ಯವಾಗದೇ ಆಕಸ್ಮಿಕವಾಗಿ ಮಹಿಳೆಯರ ಶೌಚಾಲಯಕ್ಕೆ ಪ್ರವೇಶಿಸಿದ್ದಾರೆ.
ಛೋಟಾ ಉದೇಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸಂವಾದ್ ಕಾರ್ಯಕ್ರಮದಲ್ಲಿ ಯುವಕರೊಂದಿಗೆ ಸಂವಾದ ನಡೆಸುವ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಹುಲ್ ಗಾಂಧಿ ಜಿಲ್ಲೆಗೆ ಆಗಮಿಸಿದ್ದರು. ಈ ವೇಳೆ ಗುಜರಾತಿ ಭಾಷೆಯಲ್ಲಿಯಷ್ಟೇ ಸೂಚನಾ ಫಲಕವಿತ್ತು, ಪುರುಷರು, ಮಹಿಳೆಯರಿಗಾಗಿ ಇರುವ ಶೌಚಾಲಯಗಳೆಂದು ಗುರುತಿಸುವ ಚಿಹ್ನೆಯೂ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಆಕಸ್ಮಿಕ ಘಟನೆ ನಡೆದಿದೆ.
ರಾಹುಲ್ ಗಾಂಧಿ ಹೊರಬರುತ್ತಿದ್ದಂತೆಯೇ ಸ್ಥಳೀಯರು ನಗುತ್ತಿರುವುದನ್ನು ಮಾಧ್ಯಮಗಳು ಸೆರೆಹಿಡಿದಿವೆ.