ಯೋಗಗುರು ಬಾಬಾ ರಾಮ್ ದೇವ್ 
ದೇಶ

ಪಟಾಕಿ ನಿಷೇಧ: ಹಿಂದುಗಳನ್ನು ಗುರಿ ಮಾಡಲಾಗುತ್ತಿದೆ- 'ಸುಪ್ರೀಂ' ಆದೇಶದ ವಿರುದ್ದ ಬಾಬಾ ರಾಮ್ ದೇವ್ ಕಿಡಿ

ರಾಜಧಾನಿ ದೆಹಲಿಯಲ್ಲಿ ದೀಪಾವಳಿ ಆಚರಣೆ ವೇಳೆ ಸಿಡಿಮದ್ದು ಮಾರಾಟವನ್ನು ಸುಪ್ರೀಂಕೋರ್ಟ್ ನಿಷೇಧಿಸಿರುವುದನ್ನು ಬಾಬಾ ರಾಮ್ ದೇವ್ ಅವರು ತೀವ್ರವಾಗಿ ಖಂಡಿಸಿದ್ದಾರೆ...

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ದೀಪಾವಳಿ ಆಚರಣೆ ವೇಳೆ ಸಿಡಿಮದ್ದು ಮಾರಾಟವನ್ನು ಸುಪ್ರೀಂಕೋರ್ಟ್ ನಿಷೇಧಿಸಿರುವುದನ್ನು ಯೋಗಗುರು ಬಾಬಾ ರಾಮ್ ದೇವ್ ಅವರು ತೀವ್ರವಾಗಿ ಖಂಡಿಸಿದ್ದಾರೆ. 
ಪಟಾಕಿ ನಿಷೇಧ ಆದೇಶ ಕುರಿತಂತೆ ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ದೇಶದಲ್ಲಿ ಇಂದು ನಿರ್ದಿಷ್ಟ ಸಮುದಾಯವನ್ನು ಗುರಿ ಮಾಡಲಾಗುತ್ತಿದೆ. ಹಿಂದುಗಳನ್ನು ಗುರಿ ಮಾಡಲಾಗುತ್ತಿದ್ದು, ಹಿಂದೂಗಳ ಹಬ್ಬಗಳನ್ನು ರಡಾರ್ ಗಳನ್ನು ತರುವುದು ಸರಿಯಲ್ಲ ಎಂದು ಹೇಳಿದ್ದಾರೆ. 
ಪ್ರತಿಯೊಂದಕ್ಕೂ ಕಾನೂನಾತ್ಮಕ ನಿರ್ಣಯಗಳನ್ನು ತೆಗೆದುಕೊಳ್ಳುವುದು ಸರಿಯಿದೆಯೇ? ನಾನು ಕೂಡ ಶಾಲೆಗಳು, ವಿಶ್ವವಿದ್ಯಾಲಯಗಳನ್ನು ನಡೆಸುತ್ತಿದ್ದೇನೆ. ಕೈಯಲ್ಲಿ ಸುಡುವ ಹಾಗೂ ಕಡಿಮೆ ಶಬ್ದವುಳ್ಳ ಪಟಾಕಿಗಳನ್ನು ಹಚ್ಚಲು ನಾವು ಅನುಮತಿ ನೀಡಿದ್ದೇವೆ. ಅತೀ ಹೆಚ್ಚು ಶಬ್ಧ ಮಾಡುವ ಪಟಾಕಿಗಳಿಗೆ ನಾವು ಬೆಂಬಲಿಸುವುದಿಲ್ಲ. ದೊಡ್ಡ ದೊಡ್ಡ ಪಟಾಕಿಗಳ ಮೇಲೆ ನಿಷೇಧ ಹೇರಬೇಕಿದೆ ಎಂದಿದ್ದಾರೆ. 
ಇದೇ ವೇಳೆ ಪಟಾಕಿ ನಿಷೇಧ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೆ ಬೆಂಬಲ ಸೂಚಿಸಿರುವ ಶಶಿ ತರೂರ್ ವಿರುದ್ದ ಕಿಡಿಕಾರಿರುವ ಅವರು, ಬುದ್ಧಿವಂತ ವ್ಯಕ್ತಿ ತರೂರ್ ಅವರು ಈ ರೀತಿ ಮಾತನಾಡಬಾರದು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!