ಚೆನ್ನೈ: ಯುವಕನೊಬ್ಬನ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ಯಾರಾಲಂಪಿಕ್ ಚಿನ್ನದ ಪದಕ ವಿಜೇತ ಟಿ. ಮರಿಯಪ್ಪನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮದ್ರಾಸ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ.
ಸೇಲಂ ಜಿಲ್ಲೆಯ ಕಡಯಂಪಟ್ಟಿ ತಾಲ್ಲೂಕಿನ ಎಂ.ಮುನಿಯಮ್ಮಲ್ ಎಂಬುವವರು ನ್ಯಾಯಮೂರ್ತಿ ಎಂ.ಎಸ್.ರಮೇಶ್ ಅವರಿಗೆ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ನಿನ್ನೆ ಕೈಗೆತ್ತಿಕೊಳ್ಳಲಾಗಿತ್ತು. ಪ್ಯಾರಾಲಂಪಿಕ್ ಆಟಗಾರ ಮರಿಯಪ್ಪನ್ ಅವರನ್ನು ಪ್ರತಿವಾದಿಯನ್ನಾಗಿ ಮೊಕದ್ದಮೆ ಹೂಡಿ ಅಕ್ಟೋಬರ್ 24ಕ್ಕೆ ವಿಚಾರಣೆಯನ್ನು ಮುಂದೂಡಿತು.
ತಮ್ಮ ಪುತ್ರನ ದ್ವಿಚಕ್ರ ವಾಹನಕ್ಕೆ ತಮ್ಮ ಕಾರನ್ನು ಡಿಕ್ಕಿ ಹೊಡೆದು ಸಾವಿಗೆ ಕಾರಣರಾಗಿದ್ದಾರೆ ಎಂದು ಮುನಿಯಮ್ಮಲ್ ಆರೋಪಿಸಿದ್ದಾರೆ.