ದೇಶ

ಮಧ್ಯ ಪ್ರದೇಶ ಸರ್ಕಾರದಿಂದಲೂ ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಕಡಿತ

Srinivasamurthy VN
ಭೋಪಾಲ್: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಿದ ಬೆನ್ನಲ್ಲೇ ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳು ತಮ್ಮ ಪಾಲಿನ ತೆರಿಗೆ ಪ್ರಮಾಣದಲ್ಲಿ ಕಡಿತಗೊಳಿಸಿದ್ದವು. ಇದೀಗ ಈ ಪಟ್ಟಿಗೆ  ಮಧ್ಯ ಪ್ರದೇಶ ಸರ್ಕಾರ ಕೂಡ ಸೇರ್ಪಡೆಯಾಗಿದೆ.
ಮೂಲಗಳ ಪ್ರಕಾರ ಮಧ್ಯ ಪ್ರದೇಶ ಸರ್ಕಾರ ಪೆಟ್ರೋಲ್ ಮೇಲಿನ ರಾಜ್ಯದ ತೆರಿಗೆ ಪ್ರಮಾಣದಲ್ಲಿ ಶೇ.5ರಷ್ಟು ಮತ್ತು ಡೀಸೆಲ್ ಮೇಲಿನ ತೆರಿಗೆ ಪ್ರಮಾಣದಲ್ಲಿ ಶೇ.3ರಷ್ಟು ಮೌಲ್ಯವರ್ಧಿತ ತೆರಿಗೆಯನ್ನ ಕಡಿತಗೊಳಿಸಿದೆ. ನೂತನ  ದರಗಳು ನಿನ್ನೆ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪರಿಷ್ಕರಣೆಗೊಂಡಿವೆ.

ಕಳೆದ ಮೂರು ತಿಂಗಳಿನಿಂದ ಇಂಧನ ಬೆಲೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡುಬಂದಿತ್ತು. ಪ್ರಮುಖವಾಗಿ ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆಗಳನ್ನು ನಿತ್ಯ ಪರಿಷ್ಕರಣಿಗೆ ಒಳಪಡಿಸಿದಾಗಿನಿಂದಲೂ ಬೆಲೆಗಳು  ಗಗನದತ್ತ ಮುಖ ಮಾಡಿದ್ದವು. ಇದೇ ಕಾರಣಕ್ಕೆ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಪೆಟ್ರೋಲ್ ಡೀಸೆಲ್ ಗೂ ಜಿಎಸ್ ಟಿ ಅಳವಡಿಸಬೇಕು ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ತನ್ನ ಪಾಲಿನ  ತೆರಿಗೆ ಪ್ರಮಾಣದಲ್ಲಿ ಇಳಿಕೆ ಮಾಡಿತ್ತು. ಅಲ್ಲದೆ ರಾಜ್ಯ ಸರ್ಕಾರಗಳೂ ಕೂಡ ತಮ್ಮ ಪಾಲಿನ ತೆರಿಗೆ ಪ್ರಮಾಣದಲ್ಲಿ ಇಳಿಕೆ ಮಾಡಬೇಕು ಎಂದು ಕೇಳಿತ್ತು.
SCROLL FOR NEXT