ದೇಶ

ಗುಜರಾತ್ ಚುನಾವಣೆ ದಿನಾಂಕ ಘೋಷಣೆ ವಿಚಾರ: ಆಯೋಗ ದ ನಿರ್ಧಾರಕ್ಕೆ ಪ್ರತಿಪಕ್ಷಗಳ ಟೀಕೆ

Raghavendra Adiga
ನವದೆಹಲಿ: ಚುನಾವಣಾ ಆಯೋಗವು ಗುಜರಾತ್ ಚುನಾವಣೆ ದಿನಾಂಕಗಳನ್ನು ಘೋಷಿಸದೆ ತಡೆ ಹಿಡಿದದ್ದಕ್ಕೆ ವಿರೋಧ ಪ್ರಕ್ಷದಿಂದ ಟೀಕೆಗಳು ಎದುರಾಗಿವೆ.  ರಾಜಕೀಯ ಲಾಭಕ್ಕಾಗಿ ಚುನಾವಣಾ ದಿನಾಂಕ ಘೋಷಣೆ ಮುಂದೂಡಲು ಮೋದಿ ಸರ್ಕಾರ ಚುನಾವಣಾ ಆಯೋಗಕ್ಕೆ ಒಅತ್ತಡ ಹೇರಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
"ಹಿಮಾಚಲ ಪ್ರದೇಶ ಚುನಾವಣೆ ದಿನಾಂಕ ಘೋಷಿಸಿದರೂ ಗುಜರಾತ್ ಚುನಾವಣೆಗೆ ದಿನಾಂಕ ಘೋಷಣೆ ಯನ್ನು ಮುಂದೂದಲು ಮೋದಿ ಸರ್ಕಾರ ಚುನಾವನಾ ಆಯೋಗಕ್ಕೆ ಒತ್ತಡ ಹೇರುತ್ತಿದೆ." ಎಂದು ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ರಣದೀಪ್ ಸುರ್ಜೆವಾಲಾ ಅವರು ಟ್ವೀಟ್ ಮಾಡಿದ್ದಾರೆ.
ಗುಜರಾತ್ ಚುನಾವಣೆ, ಹಿಮಾಚಲ ಪ್ರದೇಶದ ಚುನಾವಣಾ ಪಲಿತಾಂಶ ಘೋಷಣೆ ಆಗುವ ಡಿ.18 ರೊಳಗೆ ಪೂರ್ಣಗೊಳ್ಳಲಿದೆ ಎಂದು ಚುನಾವಣಾ ಆಯೋಗ ಹೇಳಿದೆಯಾದರೂ, ವಿರೋಧ ಪಕ್ಷಗಳಿಗೆ ಇದರಿಂದ ಸಮಾಧಾನವಾಗಿಲ್ಲ.
"ಗುಜರಾತ್ ಚುನಾವಣಾ ದಿನಾಂಕಗಳನ್ನು ಪ್ರಕಟಿಸುವ ಮೂಲಕ ನಿಜವಾದ ಸಂವಿಧಾನಿಕ ಸಂಸ್ಥೆಯಾಗಿ ಆಯೋಗ ಗುರುತಿಸಿಕೊಳ್ಳಬೇಕು. ಈ ತಕ್ಷಣವೇ ನೀತಿ ಸಂಹಿತೆ ಜಾರಿ ಮಾದಬೇಕೆಂದು ಸುರ್ಜೇವಾಲಾ ಒತ್ತಾಯಿಸಿದರು.
ಅ.16ರಂದು ಗುಜರಾತಿಗೆ ಭೇಟಿ ನೀದಲಿರುವ ಮೋದಿ ಅಲ್ಲಿ ಇನ್ನಷ್ಟು ಜನಪ್ರಿಯ ಕಾರ್ಯಕ್ರಮಗಳ ಘೊಷಣೆ ಮಾಡಲಿದ್ದಾರೆ. ಎಂದು ಸುರ್ಜೇವಾಲಾ ಹೇಳಿದ್ದಾರೆ.
ಎನ್ ಸಿಪಿ ಮುಖಂಡ ಡಿ.ಪಿ. ತ್ರಿಪಾಠಿ ಸಹ ಇದೇ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
"ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸದಿರುವುದಕ್ಕೆ ತಾರ್ಕಿಕ ವಿವರಣೆ ಇಲ್ಲದ ಕಾರಣ ಗುಜರಾತ್ ಚುನಾವಣೆ ದಿನಾಂಕಗಳನ್ನು ಆಯೋಗ ತಕ್ಷಣವೇ ಘೋಷಿಸಬೇಕು" ಎಂದು ತ್ರಿಪಾಠಿ ಹೇಳಿದ್ದಾರೆ. 
"ಜಪಾನ್ ಪ್ರಧಾನಮಂತ್ರಿ ಶಿಂಝೊ ಅಬೆ ಅವರು ಇತ್ತೀಚೆಗೆ ಅಹಮದಾಬಾದ್ ಗೆ ಭೇಟಿ ನೀಡಿದ್ದು ಇದು ಗುಜರಾತ್ ಮತದಾರರ ಮೇಲೆ ಪ್ರಭಾವವನ್ನುಂಟು ಮಾಡಿದೆ. ಪ್ರಧಾನಿ ಮೋದಿ ನಡೆ ಸರಿಯಲ್ಲ" ಎಂದು ಅವರು ಹೇಳಿದರು.
ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ ರಾಜಾ,  ಜೆಡಿ-ಯು ನಾಯಕ ಶರದ್ ಯಾದವ್ ಸಹ ಚುನಾವನಾ ಆಯೋಗದ ತೀರ್ಮಾನವನ್ನು ಟೀಕಿಸಿದ್ದಾರೆ.
SCROLL FOR NEXT