ಅಮರೀಂದರ್ ಸಿಂಗ್ 
ದೇಶ

ಕಾಂಗ್ರೆಸ್‌ಗೆ ಪುನಶ್ಚೇತನ, ಬಿಜೆಪಿಯ ಪತನ ಶುರು: ಅಮರೀಂದರ್ ಸಿಂಗ್

ಪಂಜಾಬ್ ರಾಜ್ಯದ ಗುರುದಾಸ್ ಪುರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಗಳಿಸುವ ಮೂಲಕ ಪಕ್ಷ ಪುನಶ್ಚೇತನ...

ಚಂಢಿಗಡ್(ಪಂಜಾಬ್): ಪಂಜಾಬ್ ರಾಜ್ಯದ ಗುರುದಾಸ್ ಪುರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಗಳಿಸುವ ಮೂಲಕ ಪಕ್ಷ ಪುನಶ್ಚೇತನ ಪಡೆಯುತ್ತಿದ್ದು ಬಿಜೆಪಿ ಕೆಳಗಿಳಿಯುತ್ತಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹೇಳಿದ್ದಾರೆ. 
ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಗೆ ಭಾರೀ ಹಿನ್ನೆಡೆಯಾಗುತ್ತಿದ್ದ ಗುರುದಾಸ್ ಪುರ ಮತ್ತು ಕೇರಳದಲ್ಲಿನ ಗೆಲುವು ಪಕ್ಷಕ್ಕೆ ಚೇತರಿಕೆ ತಂದುಕೊಟ್ಟಿದೆ. ಇದು ಸಂತೋಷದ ವಿಷಯ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. 
ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ(ಎಎಪಿ) ಶೇಖಡ 2.7ರಷ್ಟು ಮತಗಳನ್ನು ಗಳಿಸಿತ್ತು ಆದರೆ ಈ ಬಾರಿ ಅದನ್ನು ಎಎಪಿ ಕಳೆದುಕೊಂಡಿದೆ. ಈ ಚುನಾವಣೆಯ ಗೆಲುವು ಬದಲಾವಣೆಯನ್ನು ಎತ್ತಿ ತೋರಿಸುತ್ತಿದೆ ಎಂದರು. 
ಸರಕು ಮತ್ತು ಸೇವೆಗಳ ತೆರಿಗೆ(ಜಿಎಸ್ಟಿ) ಜಾರಿಯಿಂದ ವ್ಯಾಪಾರಸ್ಥರು ನೊಂದಿದ್ದಾರೆ. ಇನ್ನು ನೋಟು ನಿಷೇಧದಿಂದ ಬೇಸತ್ತಿರುವ ಮತದಾದರು ಈ ಬಾರಿ ಕಾಂಗ್ರೆಸ್ ಅನ್ನು ಬೆಂಬಲಿಸಿದ್ದಾರೆ ಎಂದು ಅಮರೀಂದರ್ ಸಿಂಗ್ ಹೇಳಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!